ಉಡುಪಿ, ಏ 13(MSP): ಚುನಾವಣಾ ನಾಮ ಪತ್ರ ಸಲ್ಲಿಕೆಯಾದ ನಂತರ ನಾನು ವ್ಯಾಪಕವಾಗಿ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದ 7 ಜನ ಶಾಸಕರು ಹಾಗೂ 2 ಜಿಲ್ಲೆಯ ಅದ್ಯಕ್ಷರುಗಳು, ಸಾವಿರಾರು ಮುಖಂಡರು ಹಾಗೂ ಕಾರ್ಯಕರ್ತರ ಏಕದ್ದೇಯವಾಕ್ಯದೊಂದಿಗೆ "ಮತ್ತೊಮ್ಮೆ ಮೋದಿ" ಪ್ರಧಾನಿ ಎಂದು ಅಹೋರಾತ್ರಿ ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದು ಈ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚು ಅಂತರದಿಂದ ಪಕ್ಷದ ಕಾರ್ಯಕರ್ತರ ಸಂಘಟನೆ ಬಲದಿಂದ ಗೆಲ್ಲುವುದಲ್ಲಿ ಸಂಶಯ ನನಗಿಲ್ಲ, ಸೋಲುವ ಭೀತಿ ಇರುವುದು ಮೈತ್ರಿ ಪಕ್ಷದ ಅಭ್ಯರ್ಥಿಗೆ. ಬಿಜೆಪಿಗೆ ಎಂದೂ ಸೋಲು ಇಲ್ಲ ಎಂದು ಶೋಭಾ ಕರಂದ್ಲಾಜೆ ಕಾಪು ಕ್ಷೇತ್ರದ ಹಿರಿಯಡ್ಕದಲ್ಲಿ ಸಾರ್ವಜನಿಕ ಸಭೆಯಲ್ಲಿ ಹೇಳಿದರು.
ಕಾಂಗ್ರೇಸ್ ನವರು ಸುಮಾರು 60 ವರ್ಷಗಳಿಂದ ಇವತ್ತಿಗೂ ಇಂದಿರಾ ಗಾಂಧಿಯ ಹೆಸರನ್ನು ಹೇಳುತ್ತಾ ಅವರ ಮತ್ತು ರಾಜೀವ ಗಾಂಧಿಯವರ ಅಂತ್ಯಸಂಸ್ಕಾರದ ವೀಡಿಯೊ ತುಣುಕುಗಳನ್ನು ತೋರಿಸಿ ಮತ ಕೇಳಬಹುದಾದರೇ ಬಿಜೆಪಿ ಕಾರ್ಯಕರ್ತರು ಈ ದೇಶಕ್ಕೆ ಗೌರವ ತಂದ, 5 ವರ್ಷಗಳ ಅದ್ಭುತ ಸಾಧನೆ ಮಾಡಿದ, ಜಗತ್ತಿಗೆ ಬಲಿಷ್ಠ ಭಾರತವನ್ನು ಪರಿಚಯಿಸಿದ ಅದ್ಭುತ ಆಡಳಿತಗಾರ, ನವಭಾರತ, ಕನಸುಗಾರರ ಹೆಮ್ಮೆಯ ಪ್ರಧಾನಿಯ ಹೆಸರನ್ನು ನಾವೇಕೆ ಬಳಸಬಾರದು? ಮೈತ್ರಿ ಪಕ್ಷದವರಿಗೆ ಇದನ್ನು ಪ್ರಶ್ನಿಸಲು ನೈತಿಕತೆ ಇದೆಯೇ ?
ಈ ಬಾರಿ ಚುನವಣೆಯಲ್ಲಿ ಕನಿಷ್ಠ ಚಿಹ್ನೆ ಯನ್ನು ಉಳಿಸಿಕೊಳ್ಳಲು ಸಾದ್ಯವಾಗದ ಕಾಂಗ್ರೇಸಿಗರು ಹತಾಷರಾಗಿ ಪಕ್ಷ ಬಿಟ್ಟ ಪ್ರಮೋದ್ ರವರಿಂದ ದೆವ್ವದ ಬಾಯಿಯಿಂದ ಸಂಸ್ಕೃತ ಎಂಬಂತೆ ಹತಾಶರಾಗಿ ಹೇಳಿಕೆ ನೀಡುತ್ತಿರುವುದು ಹಾಸ್ಯಸ್ಪದವಾಗಿದೆ. ಪ್ರಮೋದ್ ಮಂತ್ರಿಯಾಗಿ, ಉಸ್ತುವಾರಿ ಸಚಿವರಾಗಿ ಉಡುಪಿಯಲ್ಲಿ ತಿರಸ್ಕರಿಸಲ್ಪಟ್ಟು, ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ತನ್ನ ಅಸ್ಥಿತ್ವವನ್ನು ಕಳೆದುಕೊಂಡ ಒಬ್ಬ ದುರ್ಬಲ ಅಭ್ಯರ್ಥಿಯಾಗಿದ್ದು ತನ್ನ ವಿಧಾನ ಸಭಾ ಕ್ಷೆತ್ರದಲ್ಲಿ ಒಂದೇ ಒಂದು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಗೆಲ್ಲಲು ಆಗದೆ, ರಾಜಕೀಯದಲ್ಲಿ ಸಂಪೂರ್ಣ ಹತಾಶಗೊಂಡು, ನಿರಂತರವಾಗಿ ಬೇರೆ ಪಕ್ಷಗಳ ಬಾಗಿಲು ಬಡಿಯುತ್ತಿರುವ ದುರ್ಬಲ ವ್ಯಕ್ತಿಯ ಹೇಳಿಕೆಗಳಿಗೆ ಉತ್ತರಿಸುವ ಅಗತ್ಯ ಬಿಜೆಪಿಗರಿಗಿಲ್ಲ ಎಂದು ತಿಳಿಸಿದ್ದಾರೆ.
ದೇಶದ ಪ್ರಧಾನಿ ನರೇಂದ್ರ ಮೋದೀಜಿ ಆಯುಷ್ಮಾನ್ ಭಾರತ ಯೋಜನೆ ಮೂಲಕ ಒಂದು ಕುಟುಂಬಕ್ಕೆ 5 ಲಕ್ಷವರೆಗಿನ ವೈಧ್ಯಕೀಯ ವೆಚ್ಚ ಭರಿಸುವ ಅದ್ಭುತ ಯೊಜನೆಯಾಗಿದ್ದು, ಕೋಟ್ಯಾಂತರ ಜನರಿಗೆ ಇದರ ಫಲಾನುಭವಿಗಳಾಗಿದ್ದಾರೆ. ಜನರಿಗೆ ಔಷಧಿ ಮಳಿಗೆಯನ್ನು ತೆರೆಯುವುದರೊಂದಿಗೆ, ಅಗ್ಗದ ದರದಲ್ಲಿ ಔಷಧಿ ನೀಡಿ ಬಡಜನರ ಪಾಲಿಗೆ ಭಾಗ್ಯ ದೇವತೆಯಾಗಿದ್ದಾರೆ. ಉಜ್ವಲ ಯೋಜನೆ ಜಾರಿಗೆ ತರುವ ಮೂಲಕ ಕೋಟ್ಯಾಂತರ ಮಹಿಳೆಯರ ಕಣ್ಣೀರು ಒರೆಸುವ ಕೆಲಸ ಮಡಿದ್ದು, 18,000 ಹಳ್ಳಿಗಳಿಗೆ ದೀನದಯಾಳು ಗ್ರಾಮೀಣ ವಿದ್ಯುಧೀಕರಣದ ಮೂಲಕ ಬಡವರ ಮನೆಯನ್ನು ಬೆಳಗಿಸಿದ್ದು, ಸ್ವಚ್ಛ ಭಾರತ ಯೋಜನೆಯ ಮೂಲಕ ಸ್ವಚ್ಛ ಭಾರತದ ನಿರ್ಮಾತೃ , ಲಕ್ಷ-ಲಕ್ಷಾಂತರ ಉದ್ಯೋಗ ಸೃಷ್ಟಿಸಿ ಯುವಕರ ಬಾಳಿಗೆ ಭದ್ರತೆಯನ್ನು ನೀಡಿದ್ದು, ವಿವಿಧ ವಿಮಾ ಯೊಜನೆ ಮೂಲಕ ಅಶಕ್ತರ ಬಾಳಿಗೆ ಶಕ್ತಿ ತುಂಬಿದ, ಶತ್ರು ರಾಷ್ಟ್ರಗಳಿಂದ, ಉಗ್ರಗಾಮಿಗಳಿಂದ, ದೇಶವನ್ನು ಮುಕ್ತಗೊಳಿಸಿದ, ಈ ದೇಶದ ಪ್ರಧಾನಿಯನ್ನು ಜನ ಮರೆಯುವರೇ? ಸಂಕಲ್ಪಿತ ಭಾರತ, ಸಶಕ್ತ ಭಾರತಕ್ಕಾಗಿ ಮೋದಿಯವರೊಂದಿಗೆ ಕೈ ಜೋಡಿಸಿ ಎಂದು ಶೋಭಾ ಕರಂದ್ಲಾಜೆ ವಿನಂತಿಸಿದರು.
ಸಭೆಯಲ್ಲಿ ಕುಯಿಲಾಡಿ ಸುರೇಶ್ ನಾಯಕ್, ಗುರ್ಮೆ ಸುರೇಶ್ ಶೆಟ್ಟಿ, ಶಾಸಕ ಲಾಲಾಜಿ. ಆರ್. ಮೆಂಡನ್, ಕುತ್ಯಾರು ನವೀನ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉಮೇಶ್ ಶೆಟ್ಟಿ, ಹರೀಶ್, ಪ್ರವೀಣ್ ಪೂಜಾರಿ, ಸಂಧ್ಯಾ ಕಾಮತ್, ಜಿಯಾನಂದ ಹೆಗ್ಡೆ, ಸುರೇಶ್ ಶೆರ್ವೆಗಾರ್, ಸತ್ಯಾನಂದ ನಾಯಕ್, ಅಶೋಕ್ ಜೋಗಿ, ಸವಿತಾ ನಾಯಕ್. ಮೊದಲಾದವರು ಉಪಸ್ಥಿತರಿದ್ದರು.