ಮಂಗಳೂರು, ಅ 05 (DaijiworldNews/MS): ತುಂಬೆ ಬಳಿ ಲಾರಿಯೊಂದಕ್ಕೆ ವಿದ್ಯುತ್ ತಂತಿ ಸಿಲುಕಿ, ವಿದ್ಯುತ್ ಕಂಬವೊಂದು ಕಿತ್ತು ರಸ್ತೆಗೆ ವಾಲಿದ ಘಟನೆ ನಡೆದಿದ್ದು, ಅದೃಷ್ಟವಾಶತ್ ಯಾವುದೇ ಅಪಾಯವಿಲ್ಲದೇ ಹಲವು ವಾಹನ ಸವಾರರು ಪಾರಾಗಿ ಹೋಗಿದ್ದಾರೆ.
ಬೆಂಗಳೂರಿನಿಂದ ಎಚ್ಪಿಸಿಎಲ್ಗೆ ತೆರಳುತ್ತಿದ್ದ ಲಾರಿಯ ಚಾಲಕ ತನ್ನ ತುಂಬೆ ಬಳಿ ಲಾರಿಯ ಹಿಂಬಾಂಗದಲ್ಲಿ ಲೋಡ್ ಆಗಿದ್ದ ಕೆಲವು ವಸ್ತುಗಳಿಗೆ ರಸ್ತೆ ಬದಿಯ ವಿದ್ಯುತ್ ಕಂಬದ ತಂತಿಗಳು ಸಿಲುಕಿದೆ. ಈ ಬಗ್ಗೆ ಅರಿವಿಲ್ಲದೇ ಚಾಲಕ ಮುಂದಕ್ಕೆ ಚಲಿಸಿದಾಗ ವಿದ್ಯುತ್ ತಂತಿಗಳು ಎಳೆದಾಡಿದಂತಾಗಿ , ಕಂಬವು ರಸ್ತೆಗೆ ವಾಲಿಕೊಂಡಿದ್ದು. ಜೊತೆಗೆ ವಿದ್ಯುತ್ ತಂತಿಗಳು ರಸ್ತೆಗೆ ಬಿದ್ದವು. ವಾಹನ ನಿಬಿಡ ರಸ್ತೆಯಲ್ಲಿ ಹಲವು ವಾಹನ ಸಂಚರಿಸುತ್ತಿದ್ದು ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ಈ ಘಟನೆಯಿಂದಾಗಿ ವಾಹನ ಸಂಚಾರಕ್ಕೆ 20 ನಿಮಿಷಗಳ ಕಾಲ ಅಡ್ಡಿಯಾಗಿತ್ತು. ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ವಿದ್ಯುತ್ ತಂತಿಗಳನ್ನು ತೆಗೆದು ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.