ಮಂಗಳೂರು, ಎ13(SS): ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಬರಲಿದ್ದು ಇಡೀ ಕರಾವಳಿಯೇ ಮೋದಿಯವರನ್ನು ಸ್ವಾಗತಿಸಲು ಸಜ್ಜಾಗಿದೆ. ಚುನಾವಣಾ ಪ್ರಚಾರಕ್ಕಾಗಿ ಮೋದಿ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರ ಪೊಲೀಸರು ಭದ್ರತೆ ಬಿಗುಗೊಳಿಸಿದ್ದಾರೆ. ಈ ನಡುವೆ ಮಂಗಳೂರಿನಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ನಡೆಸಲು ವಿಪಕ್ಷಗಳು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಂಗಳೂರಿಗೆ ಆಗಮಿಸುವ ಮೋದಿಯವರಿಗೆ ಗೋ ಬ್ಯಾಕ್ ಹೇಳಿ ಪ್ರತಿಭಟನೆ ನಡೆಸಲಿದ್ದೇವೆ. ಜಿಲ್ಲೆಯ ಹದಿನೇಳುವರೆ ಲಕ್ಷ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದು, ಮೋದಿ ಗೋ ಬ್ಯಾಕ್ ಎಂಬ ಸ್ಲೋಗನ್ ನೊಂದಿಗೆ ಘೋಷಣೆ ಕೂಗಲಿದ್ದೇವೆ ಎಂದು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿಬರುತ್ತಿದೆ.
ಈ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಐವನ್ ಡಿಸೋಜಾ ಮಾತನಾಡಿದ್ದು, ಲಾಭದಾಯಕವಾಗಿದ್ದ ಬ್ಯಾಂಕನ್ನು ನಷ್ಠದ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಿದ್ದಾರೆ. ಇದರಿಂದ ಕರಾವಳಿ ಜನರು ಬೇಸರಗೊಂಡಿದ್ದಾರೆ. ಆದ್ದರಿಂದ ವಿಜಯಾ ಬ್ಯಾಂಕ್ ವಿಲೀನ ವಿಚಾರದ ಬಗ್ಗೆ ಪ್ರಧಾನಿ ಜೊತೆ ವಿಚಾರ ಮಂಡಿಸಬೇಕು. ವಿಜಯಾ ಬ್ಯಾಂಕನ್ನು ಮರಳಿ ತರಬೇಕು. ಚೌಕಿದಾರ್ ಹೈ ಎಂದು ಹೇಳುತ್ತುರುವ ಬಿಜೆಪಿ 2014ರಿಂದ ಹೊಸ ಯೋಜನೆಗಳನ್ನು ತರುತ್ತೇವೆ ಎಂದು ಹೇಳಿಕೊಂಡೇ ಬಂದಿದ್ದು ವಿನಃ, ಯಾವುದೇ ಕಾರ್ಯ ಜಾರಿಯಾಗಿಲ್ಲ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಾ ಬ್ಯಾಂಕ್ ವಿಲೀನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಲು ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು. 2019ರಲ್ಲಿಯೂ ಇದೇ ರಾಗ ಹಾಡುತ್ತಿದ್ದಾರೆ. ಆದ್ದರಿಂದ ಇವರಿಗೆ ಚೌಕಿದಾರ್ ಚೋರ್ ಹೈ ನಾಮಧೇಯ ಸರಿಯಾಗುತ್ತೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಪಾಕಿಸ್ತಾನವನ್ನು ಬದ್ದ ವೈರಿ ಎಂದು ಹೇಳುತ್ತಾರೆ. ಆದ್ರೆ ಪಾಕ್ ಪ್ರಧಾನಿ ಮೋದಿಯೇ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಹೇಳುತ್ತಾರೆ. ಇವರ ಒಳಗುಟ್ಟೇನು ಎಂದು ಪ್ರಶ್ನಿಸಿದ್ದಾರೆ. ಮಾತ್ರವಲ್ಲ, ಮಂಗಳೂರಿಗೆ ಆಗಮಿಸುವ ಮೋದಿಯವರಿಗೆ ಗೋ ಬ್ಯಾಕ್ ಹೇಳಿ ಪ್ರತಿಭಟನೆ ನಡೆಸಲಿದ್ದೇವೆ. ಜಿಲ್ಲೆಯ ಹದಿನೇಳುವರೆ ಲಕ್ಷ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದು, ಮೋದಿ ಗೋ ಬ್ಯಾಕ್ ಎಂಬ ಸ್ಲೋಗನ್ ನೊಂದಿಗೆ ಘೋಷಣೆ ಕೂಗಲಿದ್ದೇವೆ ಎಂದು ಹೇಳಿದ್ದಾರೆ.