ಬಂಟ್ವಾಳ, ಅ 04 (DaijiworldNews/MS): ವಿಶೇಷ ಎಂಬಂತೆ ತಾಲೂಕಿನ ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಒಂದೇ ಕ್ಲಾಸಿನಲ್ಲಿ 5 ಜೋಡಿ ಅವಳಿ ಜವಳಿ ವಿದ್ಯಾರ್ಥಿಗಳು ಇದೀಗ ಎಲ್ಲರ ಕಣ್ಣಾಗಿದ್ದಾರೆ.
ಸಹಪಾಠಿಗಳಂತೂ ಪುಲ್ ಕನ್ ಪ್ಯೂಸನ್.!
ತಾಲೂಕಿನ ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 5 ಜೋಡಿ ಅವಳಿ ಜವಳಿ ವಿದ್ಯಾರ್ಥಿಗಳು ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಅಯಿಷಾ ಝಿಬಾ-ಖತೀಝಾ ಝಿಯಾ, ಶ್ರಣವಿ-ಜಾನ್ಹವಿ, ಫಾತಿಮತ್ ಕಮಿಲ-ಫಾತಿಮತ್ ಸಮಿಲ, ಆಯಿಷಾ ರೈಫಾ- ಫಾತೀಮಾ ರೌಲ, ದುಲೈಕತ್ ರುಫಿದಾ- ಹಲೀಮತ್ ರಾಫಿದ ಒಂದೇ ತರಗತಿಯಲ್ಲಿ ಕಲಿಯುತ್ತಿರುವ ಅವಳಿ ಜವಳಿ ವಿದ್ಯಾರ್ಥಿಗಳಾಗಿದ್ದು,5 ಜೋಡಿ ಅವಳಿ ಮಕ್ಕಳಲ್ಲಿ ಒಂದು ಜೋಡಿ ಹಿಂದೂ ಸಮುದಾಯದ ಹಾಗೂ ಉಳಿದಂತೆ ನಾಲ್ಕು ಜೋಡಿ ಮಕ್ಕಳು ಮುಸ್ಲಿಂ ಸಮುದಾಯದಕ್ಕೆ ಸೇರಿದವರಾಗಿದ್ದು ಆಶ್ಛರ್ಯ ಎಂಬಂತೆ ಒಂದೇ ಶಾಲೆಯ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಅವಳಿ ಜವಳಿ ಮಕ್ಕಳು ಹೆಚ್ಚಾಗಿ ರೂಪದಲ್ಲಿ ಮತ್ತು ಚಟುವಟಿಕೆಯಲ್ಲಿ ಒಂದೇ ಸಮನಾಗಿರುವುದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆಲವೊಮ್ಮೆ ತಬ್ಬಿಬ್ಬಗುವ ಪ್ರಸಂಗಗಳು ನಡೆಯುತ್ತಿರುತ್ತದೆ. ಒಮ್ಮೊಮ್ಮೆ ಸಹಪಾಠಿಗಳು ಪೂಲ್ ಆಗುವ ಸಂದರ್ಭಗಳು ಕೂಡ ಬಂದಿವೆಯಂತೆ.
ಒಂದಿಬ್ಬರು ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿ ಕಂಡು ಬಂದಿರುವ ಸಂಗತಿಗಳು ಬೆಳಕಿಗೆ ಬಂದಿವೆ.
ಜಿಲ್ಲೆಯ ಬೇರೆ ಬೇರೆ ಶಾಲೆಗಳಲ್ಲಿ ಈ ರೀತಿಯ ಅವಳಿ ಜವಳಿ ಮಕ್ಕಳ ಬಗ್ಗೆ ವರದಿಯಾಗಿದೆ.ಆದರೆ ಬಂಟ್ವಾಳ ತಾಲೂಕಿನಲ್ಲಿ ಬಹುಶಃ ಇದೇ ಮೊದಲ ಶಾಲೆಯಾಗಿರಬೇಕು.
ಅದರಲ್ಲೂ ಈ ಐದು ಜೋಡಿ ಕೂಡ ವಿದ್ಯಾರ್ಥಿನಿಯರು ಎಂಬುದನ್ನು ಉಲ್ಲೇಖ ಮಾಡಬೇಕಾಗುತ್ತದೆ.ಏನೇ ಇರಲಿ ಜತೆಯಾಗಿರುವ ಈ ವಿದ್ಯಾರ್ಥಿಗಳು ಶಾಲೆಗೆ ಕೀರ್ತಿಯನ್ನು ತಂದುಕೊಡಲಿ ಎಂಬುದೇ ನಮ್ಮ ಆಶಯ..