ಉಡುಪಿ, ಅ 03 (DaijiworldNews/AK): ಜಿಲ್ಲೆಯಾದ್ಯಂತ ಅನುಮತಿ ಇಲ್ಲದೇ ಮತ್ತು ಅನಧಿಕೃತವಾಗಿ ಲೈಸನ್ಸ್ ಅವಧಿ ಮೀರಿ ಇದ್ದ ಬ್ಯಾನರ್ ಗಳನ್ನು ನಗರಸ್ಥಳೀಯ ಸಂಸ್ಥೆಗಳು ಮತ್ತು ಪೋಲಿಸ್ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ಮಂಗಳವಾರದಂದು ತೆರವು ಗೊಳಿಸಲಾಯಿತು.
ಶಿವಮೊಗ್ಗದಲ್ಲಿ ನಡೆದ ಘಟನೆಯ ಬಳಿಕ ರಾಜ್ಯ ಸರಕಾರದ ಸೂಚನೆಯಂತೆ ಈ ಕಾರ್ಯಾಚರನೆಯನ್ನು ಕೈಗೊಳ್ಳಲಾಗಿತ್ತು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಡಾಕ್ಟರ್ ಅರುಣ್ ಕೆ , “ಈ ಹಿಂದೆ ಅಳವಡಿಸಿದ್ದ ಬ್ಯಾನರ್ ಗಳಲ್ಲಿ ಲೈಸನ್ಸ್ ಅವಧಿ ಮೀರಿದ ಬಳಿಕ ಕೂಡಾ ತೆರವು ಮಾಡದೇ ಇದ್ದ ಬ್ಯಾನರ್ ಗಳನ್ನು ತೆರವು ಮಾಡಲಾಗದಿದೆ. ಇದೊಂದು ಮುಂಜಾಗೃತ ಕ್ರಮವಾಗಿ ಮಾತ್ರ ಮಾಡಲಾಗಿದೆ. ಎಲ್ಲಾ ಬ್ಯಾನರ್ ಗಳನ್ನು ತೆರವು ಮಾಡಿಲ್ಲ. ಕೇವಲ ಅವಧಿ ಮೀರಿದ ಮತ್ತು ಅನುಮತಿ ಇಲ್ಲದೇ ಹಾಕಿರುವ ಬ್ಯಾನರ್ ಗಳನ್ನು ಮಾತ್ರ ತೆರವು ಮಾಡಲಾಗಿದೆ” ಎಂದರು.