ಮಂಗಳೂರು,ಅ 03 (DaijiworldNews/AK):ಭಾರತವು ಪ್ರಸ್ತುತ ಜಗತ್ತಿನ ಹೆಚ್ಚಿನ ಯುವ ಸಮುದಾಯವನ್ನು ಹೊಂದಿರುವ ದೇಶ ಮತ್ತು ಅತೀ ಪುರಾತನ ನಾಗರೀಕತೆಯನ್ನು ಹೊಂದಿರುವ ದೇಶವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ಹೇಳಿದರು.
ಸಿಟಿಜನ್ ಕೌನ್ಸಿಲ್ ಮಂಗಳೂರು ಇದರ ವತಿಯಿಂದ ಸೋಮವಾರ ನಗರದ ಟಿ.ವಿ ರಮಣ ಪೈ ಸಭಾಂಗಣದಲ್ಲಿ ನಡೆದ ವೈಚಾರಿಕ ಕಾರ್ಯಕ್ರಮದಲ್ಲಿ ' ಭಾರತ್ ಆ್ಯಂಡ್ ಸನಾತನ ಎಟರ್ನಲ್ ಕನೆಕ್ಷನ್ ಎಂಬ ವಿಷಯದ ಮೇಲೆ ನಡೆದ ವೈಚಾರಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ನಂತರ ಇನ್ನೂ ಬರುವ ನೂರನೇ ಸ್ವಾತಂತ್ರ್ಯ ವರ್ಷಾಚರಣೆಯ ಮುಂದಿಟ್ಟುಕೊಂಡು ಅಮೃತಕಾಲ್ ಎನ್ನುವ ಕಲ್ಪನೆಯಲ್ಲಿ ಭಾರತವನ್ನು ಸಧೃಡಗೊಳಿಸುವ ಯೋಜನೆಗಳು ಮತ್ತು ಗುರಿಗಳನ್ನು ಹಾಕಿಕೊಂಡಿದ್ದಾರೆ.ಭಾರತ ಮುಂದಿನ 20,25 ವರ್ಷಗಳಲ್ಲಿ ಆರ್ಥಿಕತೆಯಲ್ಲಿ ಮಹತ್ವದ ಸಾಧನೆಯ ಜೊತೆಗೆ intellectual capital ಆಗಿ ಮಾರ್ಪಾಡು ಆಗಲಿದೆ ಎಂದರು.
ಭಾರತ ಜಗತ್ತಿನ ಅತೀ ಪುರಾತನವಾದ ನಾಗರೀಕತೆಯನ್ನು ಹೊಂದಿರುವ ದೇಶವಾಗಿದೆ. ಈ ನೆಲದ ಸನಾತನ ಧರ್ಮವು ನಾವು ಯೋಚಿಸಲು ಸಾಧ್ಯವಾಗದಷ್ಟು ಪುರಾತನವಾಗಿದೆ.ನಮ್ಮಲ್ಲಿ ಸರಸ್ವತಿ ನದಿಯ ಬಗ್ಗೆ ಉಲ್ಲೇಖಿಸುವಾಗ ಆ ನದಿ ಇಲ್ಲವೇ ಇಲ್ಲ ಎನ್ನುವುದು ಒಂದು ಸಂದರ್ಭದ ವಾದವಾಗಿತ್ತು. ಅಧ್ಯಯನದ ನಂತರದ ಆ ನದಿ ಇತ್ತು ಕಾಲಕ್ರಮೇಣ ಅದು ಬತ್ತಿ ಹೋಗಿದೆ ಎನ್ನುವುದು ಫಲಿತಾಂಶದ ವರದಿಯಾಗಿತ್ತು. ಈ ಬಗ್ಗೆ ಶ್ರೀ ಕೃಷ್ಣ ಆ ಸಂದರ್ಭದಲ್ಲೇ ಸರಸ್ವತಿ ನದಿ ಬತ್ತಿ ಹೋಗಿರುವುದನ್ನು ಮಹಾಭಾರತದಲ್ಲೇ ಉಲ್ಲೇಖಿಸಿರುತ್ತಾನೆ. ಹಾಗಾಗಿ ನಮ್ಮಲ್ಲಿ ನಮ್ಮ ನಂಬಿಕೆಗಳು ವೈಜ್ಞಾನಿಕ ವಿಚಾರವನ್ನು ಒಳಗೊಂಡೇ ರೂಪಿತಗೊಂಡಿದೆ ಎಂದರು.
ಶಂಕರಾಚಾರ್ಯರು ಭಾರತದ ಕೇರಳದಿಂದ ಬಂದವರು ಅವರ ಪೀಠ ಕಾಶ್ಮೀರದಲ್ಲಿದೆ. ಅವರ ಸಮಾಧಿ ಕೇದರನಾಥದಲ್ಲಿದೆ. ಅಲ್ಲಿನ ಜನರು ಶಂಕರಾಚಾರ್ಯರನ್ನು ನೀವು ಎಲ್ಲಿಂದ ಬಂದವರು ಎಂದು ಕೇಳಿಲ್ಲ. ನಮ್ಮನ್ನು ಆರ್ಯ ದ್ರಾವಿಡ ಎಂದು ವಿಂಗಡಿಸುವ ಜನರಿಗೆ ಈ ನಂಬಿಕೆ ಮತ್ತು ಅದರ ವೈಶಾಲ್ಯತೆಗಳ ಅರಿವಿಲ್ಲ ಎಂದರು.