ಕೋಟ, ಅ 02 (DaijiworldNews/HR): ಕಳೆದೊಂದು ವಾರದಿಂದ ಉಡುಪಿ ಜಿಲ್ಲಾದ್ಯಂತ ಜಿಲ್ಲಾಡಳಿತದ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಾನೂನು ಬದ್ಧ ಸಾಗಾಟ, ಜಿ.ಪಿಎಸ್ ಅಳವಡಿಸುವ ಕುರಿತಂತೆ ಲಾರಿ ಮಾಲಿಕ ಹಾಗೂ ಚಾಲಕ ಹೋರಾಟ ತೀವ್ರಗೊಳಿಸುವ ಲಕ್ಷಣಗಳು ಗೊಚರಿಸಿದೆ.
ಸೋಮವಾರ ಕೋಟ ಮಾಂಗಲ್ಯ ಮಂದಿರಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಸಭೆಯಲ್ಲಿ ಈ ನಿಲುವು ವ್ಯಕ್ತವಾಗಿದೆ.
ಸಭೆಯಲ್ಲಿ ಮಾತನಾಡಿದ ಲಾರಿ ಮಾಲಕ ಹಾಗೂ ಚಾಲಕರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಶೆಟ್ಟಿ ಪ್ರಸ್ತುತ ಎದುರಾದ ಸಮಸ್ಯೆಗಳಿಗೆ ಜಿಲ್ಲಾಡಳಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳೇ ಕಾರಣ ನಮ್ಮ ಮೇಲೆ ಹೇರಲಾದ ಕಾನೂನು ಬದ್ಧ ಸಾಗಾಟಕ್ಕೆ ನಾವುಗಳು ಬದ್ಧರಿದ್ದೇವೆ ಏಕಾಏಕಿ ಹೇರುವುದು ಎಷ್ಟು ಸೂಕ್ತ ಕಳೆದೊಂದು ವಾರದಿಂದ ನಾವುಗಳು ಪ್ರತಿಭಟನೆ ನಡೆಸಿದ್ದರೂ ಜಿಲ್ಲಾಡಳಿತ ಹರಕೆಯ ಉತ್ತರ ನೀಡುತ್ತಿದೆ. ಸಾರ್ವಜನಿಕ ತಪ್ಪು ಸಂದೇಶ ನೀಡುವ ಆಡಳಿತಶಾಹಿಗಳ ಕ್ರಮವನ್ನು ಸಭೆಯಲ್ಲಿ ಖಂಡಿಸಿದರು.
ನಮ್ಮಗೆ ರಾಜಕಾರಣ ಬೇಕಾಗಿಲ್ಲ ಸಮಸ್ಯೆ ಬಗೆಹರಿಸಬೇಕಷ್ಟೆ ಆದರೆ ಎರಡು ಪಕ್ಷಗಳ ರಾಜಕಾರಣದ ಒಳಗೆ ನಮ್ಮ ಲಾರಿ ಚಾಲಕ ಮಾಲಕ ಸಂಘಟನೆ ದುಸ್ತರವಾಗಿದೆ. ನಮ್ಮ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡಿ ಜಿದ್ದಾಜಿದ್ದಿಗೆ ಬೀಳುವ ಜಿಲ್ಲಾಡಳಿತ ಕ್ರಮದ ವಿರುದ್ಧ ಸಭೆ ಆಕ್ರೋಶ ಹೊರಹಾಕಿತು.
ಪ್ರಸ್ತುತ ಸರಕಾರದ ಪರವಾಗಿ ಇರುವ ಮುಖಂಡರುಗಳ ಮೇಲೆ ಲಾರಿ ಮಾಲಕ ಚಾಲಕರ ಜೀವನ ನಿಂತಿದೆ ಶೀಘ್ರ ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯಪ್ರವೇಶಿಸಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸುವಂತೆ ಸಭೆ ಆಗ್ರಹಿಸಿತು. ಅಲ್ಲದೆ ಸಮಸ್ಯೆ ಇತ್ಯರ್ಥಗೊಳ್ಳುವವರೆಗೆ ನಮ್ಮ ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾಧ್ಯಕ್ಷರು ಪ್ರಕಟಿಸಿದರು.
ಇದೇ ವೇಳೆ ವಿವಿಧ ವಲಯಗಳ ಅಧ್ಯಕ್ಷರಿಂದ ಮಾಹಿತಿ ಕಲೆಹಾಕಿ ಮಾಹಿತಿ ಪಡೆಯಲಾಯಿತು.
ಈ ವೇಳೆ ಕಟ್ಟಡ ಸಾಮಾಗ್ರಿಗಳಾದ ಕೆಂಪು ಕಲ್ಲು,ಕೆಂಪು ಮಣ್ಣು ಸಾಗಾಟಕ್ಕೆ ಜಿಲ್ಲಾಡಳಿತ ಮೌಖಿಕ ಒಪ್ಪಿಗೆ ನೀಡಿರುವ ಕುರಿತು ಸಭೆ ಆಕ್ರೋಶ ವ್ಯಕ್ತಪಡಿಸಿ ಮೌಖಿಕ ಹೇಳಿಕೆ ನೀಡುವ ಬದಲು ಲಿಖಿತ ಹೇಳಿಕೆ ನೀಡಲಿ ಜನಸಾಮಾನ್ಯರನ್ನು ದಿಕ್ಕುತಪ್ಪಿಸುವ ಜಿಲ್ಲಾಡಳಿತ ಸಭೆಯಲ್ಲಿ ಪ್ರಸ್ತಾಪಿಸಿದ ವಿಷಯದ ಬಗ್ಗೆ ಆಕ್ಷೇಪ ಹೊರಗೆಡವಿ ಸಮಸ್ಯೆ ಬಗೆಹರಿಸುವವರೆಗೂ ನಮ್ಮ ಹೋರಾಟ ನಿಲ್ಲದಂತೆ ನಿರ್ಣಯ ಕೈಗೊಂಡಿತು.
ಈ ವೇಳೆ ವಿವಿಧ ವಲಯಗಳ ಅಧ್ಯಕ್ಷ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೋಟ ವಲಯದ ಅಧ್ಯಕ್ಷ ಗಣೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಕೋಟ ವಲಯದ ಸುಧೀರ್ ಮಲ್ಯಾಡಿ ನಿರ್ವಹಿಸಿದರು.