ಉಡುಪಿ,ಏ12(AZM):ಬಿಜೆಪಿ ಯುವಮೋರ್ಚಾದಿಂದ ಇಂದು ಉಡುಪಿ ಜಿಲ್ಲೆಯಲ್ಲಿ ಬೈಕ್ ರ್ಯಾಲಿ ನಡೆಸಲು ಮುಂದಾದ ಕಾರ್ಯಕರ್ತರಿಗೆ ಅನುಮತಿ ಸಿಗದ ಹಿನ್ನಲೆ ಸೈಕಲ್ ಜಾಥಾದ ಮೂಲಕ ಮೋದಿ ಪರ ಉಡುಪಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು.
ಮೋದಿ ಮತ್ತೊಮ್ಮೆ ಎಂಬ ಘೋಷಣಾ ವಾಕ್ಯದೊಂದಿಗೆ ಬಿಜೆಪಿ ಯುವಮೋರ್ಚಾದ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಲು ನಿರ್ಧರಿಸಿದ್ದರು. ಆದರೆ ಅನುಮತಿ ಸಿಗದ ಹಿನ್ನಲೆ ಉಡುಪಿಯಾದ್ಯಂತ ಸೈಕಲ್ ಜಾಥ ನಡೆಸಲಾಯಿತು.