ಪುತ್ತೂರು, ಅ 01 (DaijiworldNews/HR): ಪುತ್ತೂರು ತಾಲೂಕಿನ ತಿಂಗಳಾಡಿಯಲ್ಲಿ ಮೊಬೈಲ್ಗೆ ಕರೆ ಮಾಡಿದ ವ್ಯಕ್ತಿಗೆ ಒಟಿಪಿ ಹೇಳಿದ ಕೂಲಿಕಾರ್ಮಿಕರೋರ್ವರು ತನ್ನ ಖಾತೆಯಲ್ಲಿದ್ದ 1 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ.
ಕೂಲಿ ಕಾರ್ಮಿಕ ವ್ಯಕ್ತಿಯ ಮೊಬೈಲ್ಗೆ ಸೆ.30ರಂದು ಬೆಳಗ್ಗೆ ಸಂದೇಶವೊಂದು ಬಂದಿದ್ದು ನಿಮ್ಮ ಅಕೌಂಟ್ ನಂಬರ್ಗೆ ತಕ್ಷಣವೇ ಕೆವೈಸಿ ಮಾಡಬೇಕು ಎಂದು ತಿಳಿಸಿ ಕೆಳಗೆ ಕೆನರಾ ಬ್ಯಾಂಕ್ ಎಂದು ಬರೆಯಲಾಗಿತ್ತು.
ಈ ಬಗ್ಗೆ ಅವರು ಪುತ್ರನ ಬಳಿ ವಿಚಾರಿಸಿದ್ದು ಬ್ಯಾಂಕ್ಗೆ ಹೋಗಿ ಅಲ್ಲಿ ಅವರು ಕೆವೈಸಿ ಮಾಡಿಕೊಡುತ್ತಾರೆ ಎಂದಿದ್ದರು.
ಇನ್ನು ಮಧ್ಯಾಹ್ನ ಮತ್ತೆ ಕರೆ ಬಂದಾಗ ಕನ್ನಡದಲ್ಲಿ ಮಾತನಾಡಿದ ವ್ಯಕ್ತಿಯೊಬ್ಬ ಅಕೌಂಟ್ ನಂಬರ್ ಹೇಳಿದ್ದು, ಅದು ನನ್ನ ಅಕೌಂಟ್ ಎಂದು ಕೂಲಿ ಕಾರ್ಮಿಕ ಉತ್ತರಿಸಿದ್ದ. ಆಗ ನಿಮ್ಮ ಮೊಬೈಲ್ಗೆ ಒಟಿಪಿ ಬಂದಿದೆ. ಅದನ್ನು ಹೇಳಿ ಎಂದು ಹೇಳಿದ್ದಾಗ ಕೂಲಿ ಕಾರ್ಮಿಕ ಒಟಿಪಿ ಹೇಳಿದ್ದಾರೆ. ತಕ್ಷಣವೇ ಅಕೌಂಟ್ನಲ್ಲಿದ್ದ 1 ಲಕ್ಷ ರೂ. ಡ್ರಾ ಆಗಿರುವ ವಿಚಾರ ಬೆಳಕಿಗೆ ಬಂದಿದೆ.
ಹಣ ಕಳೆದುಕೊಂಡ ವ್ಯಕ್ತಿಯು ಕೂಲಿ ಕಾರ್ಮಿಕನಾಗಿದ್ದು, ಅಲ್ಪಸ್ವಲ್ಪ ಕೂಡಿಟ್ಟ ಹಣ ಜತೆಗೆ ಇತ್ತೀಚೆಗೆ ಸಾಲವಾಗಿ ಪಡೆದ ಹಣವನ್ನು ಖಾತೆಗೆ ಹಾಕಿದ್ದರು. ಆ ಹಣ ಇದೀಗ ವಂಚಕರ ಪಾಲಾಗಿದೆ.