ಕಾಸರಗೋಡು, ಅ 01 (DaijiworldNews/HR): ಜಿಲ್ಲೆಯ ಮೂಲಕ ಹಾಡು ಹೋಗುವ ಟ್ಯಾಂಕರ್, ಟಿಪ್ಪರ್ ಲಾರಿಗಳ ಸಮಯವನ್ನು ಪರಿಷ್ಕರಿಸಲಾಗಿದೆ ಎಂದು ಜಿಲ್ಲಾ ಅಭಿವೃದ್ದಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಇಂಪಾ ಶೇಖರ್ ಆದೇಶ ನೀಡಿದ್ದಾರೆ.
ಟ್ಯಾಂಕರ್ ಹಾಗೂ ಟಿಪ್ಪರ್ ಲಾರಿಗಳು ರಾಷ್ಟ್ರೀಯ ಹೆದ್ದಾರಿ ಮೂಲಕ ಮಾತ್ರ ಸಂಚರಿಸಬೇಕು. ರಾಜ್ಯ ಹೆದ್ದಾರಿ ಮೂಲಕ ದೀರ್ಘ ದೂರ ಟ್ಯಾಂಕರ್ ಗಳನ್ನು ಓಡಿಸಬಾರದು. ಶಾಲಾ ವಾಹನ ಗಳು ಸಂಚರಿಸುವ ಬೆಳಿಗ್ಗೆ ಹಾಗೂ ಸಂಜೆ ಸಮಯ ಗಳಲ್ಲಿ ಟಿಪ್ಪರ್ ಲಾರಿಗಳು ಸಂಚಾರ ನಡೆಸಬಾರದು ಎಂದು ಆದೇಶಿಸಿದ್ದಾರೆ.
ಇನ್ನು ಆದೇಶ ಉಲ್ಲಂಘಿಸಿದ್ದಲ್ಲಿ ವಾಹನಗಳನ್ನು ವಶಕ್ಕೆ ಪಡೆದು ಕೊಳ್ಳಲಾಗುವುದು. ಈ ಬಗ್ಗೆ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದು, ತಪಾಸಣೆ ನಡೆಸಿ ದೈನಂದಿನ ವರದಿ ನೀಡುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.