ಉಡುಪಿ,30 (DaijiworldNews/AK):ಅಕ್ಟೋಬರ್ 3 ರಂದು ಜಿಲ್ಲಾ ಲಾರಿ ಮಾಲಿಕರ ಒಕ್ಕೂಟ ಕರೆ ನೀಡಿರುವ ಬಂದ್ ಕಾನೂನು ಬಾಹಿರ ಮತ್ತು ಸಂವಿಧಾನ ವಿರೋಧಿ ಯಾಗಿದ್ದು ಇದರಿಂದಾಗಿ ಯಾವುದೇ ರೀತಿಯ ಬಂದ್ ಗೆ ಅಥವಾ ಇದಕ್ಕೆ ಸಂಬಂಧಿಸಿದ ಯಾವುದೇ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಟಾದಿಕಾರಿ ಡಾ. ಅರುಣ್ ಕೆ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅಕ್ಟೋಬರ್ . 3 ರಂದು ಉಡುಪಿ ಜಿಲ್ಲಾ ಲಾರಿ ಮಾಲಿಕರ ಒಕ್ಕೂಟ ಮತ್ತು ಇತರ ಸಂಘಟನೆಗಳು ಸರಕಾರದ ವಿವಿಧ ಆದೇಶಗಳ ವಿರುದ್ಧ ಉಡುಪಿ ಜಿಲ್ಲೆಗೆ ಬಂದ್ ಕರೆ ನೀಡಿರುತ್ತಾರೆ.
ಕಾನೂನು ಬಾಹಿರ ಸಂವಿಧಾನ ವಿರೋಧಿ ಮತ್ತು ಜನಸಾಮಾನ್ಯರ ಮೂಲಭೂತ ಹಕ್ಕು ವಿರೋಧಿ ಎಂದು ಮಾನ್ಯ ಕೇರಳ ಉಚ್ಚ ನ್ಯಾಯಾಲಯವು ಎಐಆರ್ 1997 ಕೇರಳ 291 ನೇ ನ್ಯಾಯಾಲಯದ ತೀರ್ಪಿನಲ್ಲಿ ಘೋಷಿಸಿದ್ದು, ಈ ತೀರ್ಪನ್ನು ಸವೋಚ್ಚ ನ್ಯಾಯಾಲಯವು ಸನ್ 1998 ರಲ್ಲಿ ಸಿ.ಪಿ.ಐ (ಎಮ್) v/s ಭರತ್ ಕುಮಾರ್ ಪ್ರಕರಣದಲ್ಲಿ ಬಂದ್ ಕರೆ ನೀಡುವುದು ಆ ಸಂವಿಧಾನಿಕ ಮತ್ತು ಕಾನೂನು ಬಾಹಿರ ಎಂದು ಆದೇಶಿಸಿರುತ್ತದೆ.
ಅದ್ದರಿಂದ ಲಾರಿ ಮಾಲಿಕರ ಒಕ್ಕೂಟದ ಬಂದ್ಗೆ ಅಥವಾ ಇದಕ್ಕೆ ಸಂಬಂಧಿಸಿದ ಇತರೇ ಪ್ರತಿಭಟನೆಗೆ ಅವಕಾಶವಿರುವುದಿಲ್ಲ. ಜಿಲ್ಲೆಯಲ್ಲಿ ಯಾವುದೇ ರೀತಿಯ ಮೆರವಣಿಗೆಯನ್ನು ಹಮ್ಮಿಕೊಳ್ಳಲು ಅವಕಾಶ ನೀಡಲು ಸಾಧ್ಯವಿಲ್ಲ" ಎಂದು ಸ್ವಷ್ಟಪಡಿಸಿದ್ದಾರೆ.