ಉಡುಪಿ, ಸೆ 30 (DaijiworldNews/HR): ವಿಶ್ವ ಹೃದಯ ದಿನಾಚಣೆಯ ಅಂಗವಾಗಿ ಬ್ರಹ್ಮಾವರದಲ್ಲಿ ಖ್ಯಾತ ವೈದ್ಯರಾದ ಡಾ. ಸಂದೀಪ್ ಪೈ ರವರ ಘನ ಉಪಸ್ಥಿತಿಯಲ್ಲಿ ಬೃಹತ್ ವಾಕಾಥಾನ್ ಕಾರ್ಯಕ್ರಮವನ್ನ ಹಮ್ಮಿಕೊಂಡಿತ್ತು.
ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಡಾ. ಸಂದೀಪ್ ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಸಾಕಷ್ಟು ಸಾವು ನೋವುಗಳಿಗೆ ಕಾರಣವಾಗುತ್ತಿವೆ. ಹಾಗಾಗಿ ಕಡೇ ಪಕ್ಷ ವರ್ಷಕೊಮ್ಮೆಯಾದರೂ ಕಡ್ಡಾಯವಾಗಿ ಹೃದಯ ತಪಾಸಣೆ ಅತ್ಯಗತ್ಯ ಎಂದರು. ಜೊತೆಗೆ ಈ ಅರ್ಥಪೂರ್ಣ ಕಾರ್ಯಕ್ರಮದ ಕೇಂದ್ರಬಿಂದು Glenmark ಸಂಸ್ಥೆಯನ್ನ ಕೂಡ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 80ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಫಾರ್ಮಾ ಸಂಸ್ಥೆಯ ಸಿಬ್ಬಂದಿಗಳಾದ ಜೋಸೆಫ್ ಲಾಡ್ಸನ್ ಮತ್ತು ಅನಿಲ್ ಬೇಗೂರು ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನ ನಿಭಾಯಿಸಿದರು..ಸೈಂಟ್ ಥೋಮಸ್ ಯುವಕ ಸಂಘ ಸಾಸ್ತನ ದ ಸದ್ಯಸರು ಭಾಗವಹಿಸಿದರು.