ಉಡುಪಿ, ಸೆ 29 (DaijiworldNews/HR): ಬಾರ್ಕೂರು ಹೊಸಾಳ ಗ್ರಾಮದ ನಿವಾಸಿ ಗಿರಿಜಾ ವಿ ಕಾಂಚನ್ (76) ಅವರು ಉಸಿರಾಟದ ತೊಂದರೆಯಿಂದ ಕಳೆದ ಮೂರು ದಿನಗಳ ಹಿಂದೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಗಿರಿಜಾ ವಿ ಕಾಂಚನ್ ಅವರು ಬಾರಕೂರು ಬೆಣ್ಣೆ ಕುದುರು ಮೊಗವೀರ ಮಹಿಳಾ ಸಂಘಟನೆಯ ಸ್ಥಾಪಕ ಅಧ್ಯಕ್ಷೆರಾಗಿದ್ದು, ಸತತ ಎಂಟು ವರ್ಷಗಳ ಕಾಲ ಮಹಿಳಾ ಸಂಘಟನೆ ಕಟ್ಟಿಕೊಂಡು. ಬೆಣ್ಣೆ ಕುದುರು, ಉಚ್ಚಿಲ್ಲಮಹಾಲಕ್ಷೀ, ಬಗ್ವಾಡಿ. ಮೊದಲಾದ ದೇವಸ್ಥಾನಗಳ ಜಾತ್ರಾ ಮಹೋತ್ಸವಕ್ಕೆ ಮಹಿಳಾ ಸಂಘಟನೆಯೊಂದಿಗೆ ದೇವತಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಇಳೀ ವಯಸ್ಸಿನಲ್ಲೂ ಸಂಘಟನಾ ಚತುರೆಯಾಗಿದ್ದ ಅವರು. ಕೊಡುಗೈ ದಾನಿಯಾಗಿದ್ದರು. ಬಾರ್ಕೂರು ಮೊಗವೀರ ಮಹಿಳಾ ಸೊಸೈಟಿಯ ಅಧ್ಯಕ್ಷೆ ಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.
ಮೃತರು ಪತಿ, ಹಾಗೂ ಓರ್ವ ಪುತ್ರಿ, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.