ಮಂಗಳೂರು,ಸೆ 28 (DaijiworldNews/MS): ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿಗಳನ್ನು ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಗಾಗಿ ತರಲು ತೀರ್ಮಾನಿಸಿದ್ದು, ಈ ಯೋಜನೆಗಳನ್ನು ಕಾರ್ಯಕರ್ತಗೊಳಿಸಲು ಪಿಂಚಣಿ ಫಲಾನುಭವಿಗಳ ಬ್ಯಾಂಕ್/ಅಂಚೆ ಖಾತೆಗೆ ಎನ್.ಪಿ.ಸಿ.ಐ ಲಿಂಕ್ ಮಾಡಬೇಕಾಗಿರುತ್ತದೆ.
ಹೀಗಾಗಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಆಧಾರ್ ಹಾಗೂ ಬ್ಯಾಂಕ್/ಅಂಚೆ ಖಾತೆಯೊಂದಿಗೆ ಸಂಬಂಧಪಟ್ಟ ಬ್ಯಾಂಕ್/ಅಂಚೆ ಕಚೇರಿಗೆ ತೆರಳಿದ ಇದೇ ಸೆ.30 ರೊಳಗೆ ಎನ್.ಪಿ.ಸಿ.ಐ ಮಾಡಿಸುವಂತೆ ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.