ಕೋಟ, ಸೆ 24 (DaijiworldNews/AK): ಚರಂಡಿ ದುರಸ್ಥಿ ವೇಳೆ ಕಾಮಗಾರಿ ನಡೆಸಲು ತೊಡಕು ಉಂಟು ಮಾಡಿ ಸರಕಾರದ ಜಾಗವನ್ನು ಕಬಳಿಸಿ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿ, ಹಳೆ ಚರಂಡಿಯ 4000 ಶಿಲೆಕಲ್ಲುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವ ಬಾಳೆಬೆಟ್ಟು ನಿವಾಸಿ ವಿರುದ್ಧ ಗ್ರಾಮಸ್ಥರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಘಟನೆ ಮಣೂರು ಬಾಳೆಬೆಟ್ಟುನಲ್ಲಿ ನಡೆದಿದೆ.
ಈ ವಿಚಾರಕ್ಕೆ ಸಂಬಂದಿಸಿದಂತೆ ಕುಮ್ಮಕ್ಕು ನೀಡುತ್ತಿರುವ ಕೋಟ ಗ್ರಾಮ ಪಂಚಾಯತ್ ಮಾಜಿ ಸದಸ್ಯರೊರ್ವರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಸರಕಾರದ ಜಾಗ ಪಂಚಾಯತ್ ತಮ್ಮ ವಶಕ್ಕೆ ಕೂಡಲೇ ಪಡೆದುಕೊಳ್ಳುವಂತೆ ಘೋಘಣೆ ಕೂಗಿದರು.
ಈ ಕುರಿತಂತೆ ಪಂಚಾಯತ್ ಮೃದು ದೋರಣೆ ಸರಿಯಲ್ಲ. ಕಠಿಣ ನಿಲುವನ್ನು ತೆಗೆದುಕೊಂಡು ಗ್ರಾಮಸ್ಥರ ಪರಿವಾಗಿ ಕಾರ್ಯನಿರ್ವಹಿಸಲು ಗ್ರಾಮಸ್ಥರು ಆಗ್ರಹಿಸಿದರು.