ಕಾಸರಗೋಡು, ಸೆ 21 (DaijiworldNews/HR): ರಸ್ತೆಗಳಲ್ಲಿನ ಹೊಂಡಗಳನ್ನು ಕೂಡಲೇ ಮುಚ್ಚುವಂತೆ ಜಿಲ್ಲಾಧಿಕಾರಿ ಇಂಪಾಶೇಖರ್ ಆದೇಶ ನೀಡಿದ್ದು, ಇದರಂತೆ ಚೆರ್ಕಳ- ಕಲ್ಲಡ್ಕ ರಸ್ತೆಯಲ್ಲಿನ ಅಪಾಯಕಾರಿ ಗುಂಡಿಗಳನ್ನು ಬುಧವಾರ ಮುಚ್ಚಲಾಯಿತು.
ಮೇಲ್ಪರಂಬ ಜಂಕ್ಷನ್ ಸಮೀಪದಲ್ಲಿ ಉಂಟಾಗಿದ್ದ ಹೊಂಡಗಳನ್ನು ಮುಚ್ಚಲಾಗಿದ್ದು, ಮರು ಡಾಮರೀಕರಣ ಗೊಳಿಸಲಾಯಿತು. ಕೇರಳ ರಸ್ತೆ ನಿಧಿ ಮಂಡಳಿ ಇಂಜಿನಿಯರ್ ನೇತೃತ್ವದಲ್ಲಿ ರಸ್ತೆ ದುರಸ್ತಿಗೊಳಿಸಿ ಸಂಚಾರ ಯೋಗ್ಯ ಗೊಳಿ ಸಲಾಯಿತು. ಚೆರ್ಕಳ - ಕಲ್ಲಡ್ಕ ರಸ್ತೆಯ ಲಿನ ಹೊಂಡಗಳನ್ನು ಮುಚ್ಚಿ ಸಂಚಾರ ಯೋಗ್ಯ ಗೊಳಿಸು ವಂತೆ ಗುತ್ತಿಗೆ ದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಲೋಕೋಪ ಯೋಗಿ ಇಂಜಿನಿಯರ್ ತಿಳಿಸಿದ್ದಾರೆ.
ಇನ್ನು ಕಲ್ನಾಡ್ - ಜುಮಾ ಮಸೀದಿ ಬಳಿ ರಸ್ತೆಯಲ್ಲಿನ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಲಾಗಿದೆ. ಚಂದ್ರ ಗಿರಿ ರಸ್ತೆಯ ಲ್ಲಿ ಎರಡು ದಿನಗಳ ಹಿಂದೆ ಹೊಂಡಕ್ಕೆ ಬಿದ್ದು ವಿದ್ಯಾರ್ಥಿನಿ ಯೋರ್ವಳು ಮೃತ ಪಟ್ಟ ಸ್ಥಳದಲ್ಲಿನ ಹೊಂಡ ವನ್ನು ಮುಚ್ಚಲಾಗಿದ್ದು, ಉಳಿದ ಹೊಂಡಗಳನ್ನು ಮುಚ್ಚುವ ಪ್ರಕ್ರಿಯೆ ನಡೆಯುತ್ತಿದೆ. ಚೆರ್ಕಳ-ಜಾಲ್ಸೂರು
ರಸ್ತೆಯಲ್ಲಿನ ಚೆರ್ಕಳದಿಂದ ಕೆ.ಕೆ ಪುರ ತನಕದ ರಸ್ತೆಯಲ್ಲಿನ ಹೊಂಡಗಳನ್ನು ಮುಚ್ಚಲು ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಭೆಯಲ್ಲಿ ವಿವಿಧ ರಸ್ತೆ ವಿಭಾಗ ಇಂಜಿನೀಯರ್ ಪ್ರದೀಪ್ ಕುಮಾರ್, ವಿ. ಮಿತ್ರಾ,ಸುಜಿತ್, ಕೆ. ರಾಜೀವನ್, ಪ್ರಕಾಶ್ ಪಿ., ಸಿ. ಧನ್ಯ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.