ಕಾಸರಗೋಡು, ಸೆ 20 (DaijiworldNews/MS): ಅಂಗಡಿಗೆ ನುಗ್ಗಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಹೊಸದುರ್ಗ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪಾಲಕುನ್ನುವಿನ ಮುಹಮ್ಮದ್ ಇಜಾಸ್ ಎಂ .ಕೆ (24), ಪನಯಾಲ್ ಚೇರ್ಕ ಪ್ಪಾರದ ಇಬ್ರಾಹಿಂ ಬಾದುಷಾ (25), ಕುನಿಯ ದ ಅಬ್ದುಲ್ ನಾಸರ್ (24) ಬಂಧಿತರು. ಸೆ. 10 ರಂದು ಬೆಳಿಗ್ಗೆ ಮಡಿಕೈ ಯಲ್ಲಿ ಘಟನೆ ನಡೆದಿತ್ತು. ಅಂಗಡಿಗೆ ಬಾಟ್ಲಿ ನೀರು ಕೇಳಿ ಬಂದಿದ್ದ ಇವರು ಅಂಗಡಿಯಲ್ಲಿದ್ದ ಮಾಲಕ ಸುರೇಶ್ ರವರ ಪತ್ನಿ ಬೇಬಿ (50) ರವರ ಕುತ್ತಿಗೆಯಲ್ಲಿದ್ದ ಮೂರು ಪವನ್ ನ ಚಿನ್ನದ ಸರವನ್ನು ಎಗರಿಸಿ ಬೈಕ್ ನಲ್ಲಿ ಪರಾರಿಯಾಗಿದ್ದರು .
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳಿಗಾಗಿ ತನಿಖೆ ನಡೆಸಿದ್ದರು. ಸಿಸಿ ಟಿವಿ ದೃಶ್ಯಗಳನ್ನು ಕಲೆ ಹಾಕಿದ್ದರು ಶಂಕಿತರ ಬಗ್ಗೆ ನಿಗಾ ಇರಿಸಿದ್ದರು ಈ ಬಗ್ಗೆ ಮನೆ ಹಾಗೂ ವ್ಯಾಪಾರ ಸಂಸ್ಥೆ ಗಳ ಸೇರಿದಂತೆ 480 ಕಡೆಗಳಿಂದ ಸಿ ಸಿ ಟಿ ವಿ ಕ್ಯಾಮಾರ ದೃಶ್ಯ ಗಳನ್ನು ಪರಿಶೀಲಿಸಿದ್ದರು. ಇದರಂತೆ ಮಾಹಿತಿ ಪಡೆದ ಪೊಲೀಸರು ಆರೋಪಿಗಳ ಗುರುತು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ . ಇವರು ಹಲವಾರು ಪ್ರಕರಣ ಗಳಲ್ಲಿ ಶಾಮೀಲಾದ ಬಗ್ಗೆ ತನಿಖೆ ಯಿಂದ ಬೆಳಕಿಗೆ ಬಂದಿದೆ. ಬೇಡಡ್ಕ ಠಾಣಾ ವ್ಯಾಪ್ತಿಯಲ್ಲಿ ಫೆಬ್ರವರಿ ಎರಡರಂದು ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಮಹಿಳೆಯ ಸರ ಹಾಗೂ ಮಾರ್ಚ್ 26 ತಂದು ಬಂದಡ್ಕ ಪಡುಪ್ಪು ಎಂಬಲ್ಲಿ ಆಯುರ್ವೆದ ಅಂಗಡಿ ಗೆ ನುಗ್ಗಿ ಹಾಗೂ. ಆರರದಂದು ಚೆರಿಪ್ಪಾಡಿ ಯಲ್ಲಿ ಮಹಿಳೆ ಯ ಕುತ್ತಿಗೆ ಯಲ್ಲಿದ್ದ ಸರವನ್ನು ಎಗರಿಸಿ ಪ್ರಕರಣ ಗಳಲ್ಲಿ ಶಾಮೀಲಾಗಿದ್ದಾರೆ. ಕಾಸರಗೋಡು ಅಲ್ಲದೆ ಕಂಕನಾಡಿ ಹಾಗೂ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳವು ಪ್ರಕರಣ ಗಳಲ್ಲಿ ಇವರು ಶಾಮೀಲಾಗಿರುವುದಾ ಗಿ ಪೊಲೀ ಸರು ತಿಳಿಸಿದ್ದಾರೆ.
ಹದಿನೇಳನೇ ವಯಸ್ಸಿನಲ್ಲೇ ಕಳವು ಕೃತ್ಯ ಗಳಲ್ಲಿ ಭಾಗಿಯಾಗಿರುವ ಮುಹಮ್ಮದ್ ಇಜಾಸ್ ವಿರುದ್ಧ ಎರ್ನಾಕುಲಂ, ಕೋಜಿ ಕ್ಕೋಡ್, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಮಾದಕ ವಸ್ತು ಸಾಗಾಟ ಹಾಗೂ ಮಾರಾಟ ಸೇರಿದಂತೆ 6 ಪ್ರಕರಣ ಗಳು ದಾಖಲಾಗಿವೆ ಇಬ್ರಾಹಿಂ ಬಾದುಷಾ ವಿರುದ್ಧ ಕೋಜಿಕ್ಕೊಡ್,ಕಣ್ಣೂರು ,ಕಾಸರಗೋಡು ಜಿಲ್ಲೆ ಗಳಲ್ಲಿ17 ಹಾಗೂ ಅಬ್ದುಲ್ ನಾಸರ್ ವಿರುದ್ಧ ಕಾಸರಗೋಡು ಅಲ್ಲದೆ ಮಂಗಳೂರಿನ ವಿವಿಧ ಪೊಲೀಸ್ ಠಾ ಣೆ ಗಳಲ್ಲಿ 12 ಕ್ಕೂ ಅಧಿಕ ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.