ಬಂಟ್ವಾಳ, ಏ 11(SM): ತಾಲೂಕಿನಲ್ಲಿ ಇಂದು ಸಂಜೆ ಸುರಿದ ಬಾರೀ ಗಾಳಿ ಸಿಡಿಲು ಮಳೆಗೆ ಹಲವು ಕಡೆಗಳಲ್ಲಿ ಹಾನಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 75 ರ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಬಿದ್ದು ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ.
ಮಂಗಳೂರು-ಬೆಂಗಳೂರು ರಾಷ್ಟೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದೆ. ಬೃಹತ್ ಗಾತ್ರದ ಮರ ಬಿದ್ದಿರುವ ಪರಿಣಾಮ ಹಾಗೂ ಅಧಿಕ ಸಂಖ್ಯೆಯಲ್ಲಿ ವಾಹನಗಳ ಓಡಾಟ ಇರುವುದರಿಂದ ಒಂದು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪರಿಣಾಮ ವಾಹನ ಚಾಲಕರು ಪ್ರಯಾಣಿಕರು ಪರದಾಡುವಂತಾಯಿತು.
ಪೆರಾಜೆ ಬುಡೋಳಿ ಪರಿಸರದಲ್ಲಿನ ಗಾಳಿ ಮಳೆಗೆ ಬುಡೋಳಿ ಪಂಚಾಯತ್ ಸದಸ್ಯ ನೀಲಯ್ಯ ಪೂಜಾರಿ ಯವರಿಗೆ ಸೇರಿದ ಹೋಟೆಲ್, ಕೇಶವ ಬಂಗೇರ ರವರ ಗೂಡಂಗಡಿ, ಅದ್ರಾಮ ರವರ ಗೂಡಂಗಡಿ ಯ ಶೀಟ್ ಹಾಳೆ, ಕಂಬಗಳು ಬಿದ್ದು ಅಪಾರ ಪ್ರಮಾಣದ ನಷ್ಟವುಂಟಾಗಿದೆ.