ಮಂಗಳೂರು, ಸೆ 18 (DaijiworldNews/SM): ಎಂ ಆರ್ ಪಿ ಎಲ್ ಸಂಸ್ಥೆಯ ಉದ್ಧಿಮೆಗಳ ಸಾಮಾಜಿಕ ಜವಾಬ್ದಾರಿ (C.S.R) ವಿಭಾಗದಿಂದ ಉಚಿತ ಕೃತಕ ಕೈ, ಮತ್ತು ಕಾಲು ಜೋಡಣಾ ಶಿಬಿರವನ್ನು ಜೈಪುರ್ ಫುಟ್ಸ್ ನ ನುರಿತ ತಂತ್ರಜ್ನರ ನೇತೃತ್ವದಲ್ಲಿ ಮಂಗಳೂರಿನಲ್ಲಿ ಮುಂದಿನ ಅಕ್ಟೋಬರ್ ತಿಂಗಳಲ್ಲಿ ನಡೆಸಲಾಗುತ್ತಿದೆ.
ಈ ಶಿಬಿರದಲ್ಲಿ ಪಾಲ್ಗೊಳ್ಳ ಬಯಸುವ ಫಲಾನುಭವಿಗಳು ತಮ್ಮ ವಿಳಾಸ , ದೂರವಾಣಿ ಸಂಖ್ಯೆ, ವಿಕಲಾಂಗತೆಯ ಸವಿವರದೊಂದಿಗೆ ತಮ್ಮ ಅರ್ಜಿಯನ್ನು ಎಂ ಆರ್ ಪಿ ಎಲ್ ಸಂಸ್ಥೆಗೆ ಸೆಪ್ಟೆಂಬರ್ ೨೮ರೊಳಗೆ ಕಳುಹಿಸಬೇಕು. ಶಿಬಿರಾರ್ಥಿಗಳು ಬರಬೇಕಾದ ಖಚಿತ ದಿನಾಂಕವನ್ನು ಹಾಗೂ ಮತ್ತಿತರ ವಿವರಗಳನ್ನು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅಂಚೆ ಮೂಲಕ ತಿಳಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 0824-2886058/2179 ಗೆ ಕರೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ.