ಉಳ್ಳಾಲ, ಸೆ 16 (DaijiworldNews/AK): ಬೈಕಿನಲ್ಲಿ ಬಂದು ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ಹಣಕ್ಕಾಗಿ ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಉಳ್ಳಾಲ ಪೊಲೀಸರ ತಂಡ ಬಂಧಿಸಿದ್ದಾರೆ.
ತ್ರಿಶೂರ್ ವಡಕಂಚೇರಿ ನಿವಾಸಿ ಶೇಕ್ ತನ್ಸಿರ್ (20) ಮತ್ತುಕೋಝಿಕ್ಕೋಡ್ ಕಡಮೇರಿ ನಿವಾಸಿ ಸಾಯಿಕೃಷ್ಣ ( 19) ಬಂಧಿತರು. ಇಬ್ಬರಿಂದ 2.77 ಗ್ರಾಂ ತೂಕದ ನಿಷೇಧಿತ ಎಂಡಿಎಂಎ , ಎರಡು ಮೊಬೈಲ್ ಹಾಗೂ ರೂ. 50,000 ಬೆಲೆಬಾಳುವ ಎಫ್ ಝೆಡ್ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.