ವಿಟ್ಲ, ಸೆ 16 (DaijiworldNews/AK):ಅಟೋ ರಿಕ್ಷಾದಲ್ಲಿ ಅಕ್ರಮವಾಗಿ ನಿಷೇದಿತ ಮಾದಕ ವಸ್ತುವಾದ ಗಾಂಜಾ ಸಾಗಿಸುತ್ತರಿದ್ದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸುಳ್ಯ ನಿವಾಸಿಯಾದ ಎನ್ ಎಂ ಮಹಮ್ಮದ್ ಕಲಂದರ್ ಶಾ (೩೬) ಎಂದು ಗುರುತಿಸಲಾಗಿದೆ. ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ, KA-21-B-7248ನೇ ಅಟೋರಿಕ್ಷಾವೊಂದರಲ್ಲಿ ಚಾಲಕ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಗಾಂಜಾ ಸಾಗಿಸುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆರೋಪಿಯಿಂದ ರಿಕ್ಷಾದಲ್ಲಿದ್ದ 6.110 ಕೆ.ಜಿ ತೂಕದ ಗಾಂಜಾ ಅಂದಾಜು ಮೌಲ್ಯ 1,35,00 ರೂ, ಎರಡು ಮೊಬೈಲ್ ಹಾಗೂ 900 ನಗದು, ಚಾಲಕನ ಚಾಲನಾ ಪರವಾನಿಗೆ, 1,60,000ರೂ ಅಂದಾಜು ಮೌಲ್ಯದ ಅಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.
ಎಲ್ಲ ಸೊತ್ತುಗಳ ಒಟ್ಟು ಮೌಲ್ಯ 2,96,900 ರೂ ಅಂದಾಜಿಸಲಾಗಿದೆ.ಆರೋಪಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.