ಉಡುಪಿ, ಸೆ 16 (DaijiworldNews/AK): ಪುತ್ತಿಗೆ ಮಠದ ಪರ್ಯಾಯೋತ್ಸವದ ಪೂರ್ವಭಾವಿಯಾಗಿ ರಚನೆ ಯಾಗಿರುವ ಪರ್ಯಾಯ ಸ್ವಾಗತ ಸಮಿತಿ ಮತ್ತು ಕಾರ್ಯಾಲಯವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾಕ್ಟರ್ ಡಿ ವಿರೇಂದ್ರ ಹೆಗ್ಗಡೆ ಯವರು ಉದ್ಘಾಟಿಸಿದರು.
2024ರಲ್ಲಿ ನಡೆಯುವ ವೈಭವೋಪೇತ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವದ ಸ್ವಾಗತ ಸಮಿತಿ ಮತ್ತು ಕಾರ್ಯಾಲಯ ನಿರ್ಮಾಣ ಗೊಂಡಿದೆ.
ಪ್ರಾಸ್ತಾವಿಕ ವಾಗಿ ಮಾತನಾಡಿದ ರಘುಪತಿ ಭಟ್ ಅವರು "ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಈಗಾಗಲೆ 21 ಸಮಿತಿಗಳನ್ನು ರಚನೆ ಮಾಡಿ ಸಭೆಗಳನ್ನು ಕೂಡಾ ಮಾಡಲಾಗಿದೆ. ಸ್ವಾಮೀಜಿಯವರ ಆಶಯದಂತೆ ಅವರ ಈ ಹಿಂದಿನ ಪರ್ಯಾಯ ಅವಧಿಯಲ್ಲಿ ನಿರ್ಮಾಣಗೊಂಡ ಸ್ವಾಗತ ಗೋಪುರದಿಂದ ಮೆರವಣಿಗೆ ಆರಂಭ ಮಾಡಲು ನಿರ್ಧಾರ ಮಾಡಲಾಗಿದೆ. ಮಾತ್ರವಲ್ಲದೇ ದಂಡತೀರ್ಥ ಸ್ನಾನ ಘಟ್ಟದದಿಂದ ದೀಪಾಲಂಕಾರ ಆರಂಭವಾಗಲಿದೆ. ಅತಿ ಹೆಚ್ಚು ಭಕ್ತಾಧಿಗಳು ಆಗಮಿಸುವ ಕಾರಣ ಅವರ ವಸತಿಗೆ ಸೂಕ್ತ ವ್ಯವಸ್ಥೆ ಆಗಲು ಮನೆಯ ಮಾಲಕರು ಅವಕಾಶ ಮಾಡಿಕೊಟ್ಟು ಅದಕ್ಕೆ ಸೂಕ್ತ ವ್ಯವಸ್ಥೆ ಗೆ ಯೋಜನೆ ರೂಪಿಸಲಾಗಿದೆ. ಸುಮಾರು 5 ಕೋಟಿ ವೆಚ್ಚದ ನಿರೀಕ್ಷೆ ಮಾಡಿದ್ದೇವೆ. ಇದಕ್ಕೆ ರಾಷ್ಟ್ರೀಕೃತ ಬ್ಯಾಂಕ್, ವ್ಯವಹಾರ ಸಂಸ್ಥೆ ಗಳ ಸಿ ಎಸ್ ಆರ್ ನಿದಿ ಅಡಿಯಲ್ಲಿ ಅನುದಾನ ನೀಡಲು ಮನವಿ ಮಾಡಿದ್ದೇವೆ" ಎಂದರು.
ಸ್ವಾಗತ ಸಮಿತಿ ಅಧ್ಯಕ್ಷರಾದ ಡಾಕ್ಟರ್ ಎಚ್ ಎಸ್ ಬಲ್ಲಾಳ್ ಮಾತನಾಡಿ "ಈ ಪರ್ಯಾಯದ ಸಂದೇಶ ಅವಿಭಜಿತ ದಕ್ಷಿಣ ಕನ್ನಡ ಮಾತ್ರವಲ್ಲದೇ ಇಡೀ ವಿಶ್ವದ ಮೂಲೆ ಮೂಲೆಗೆ ಪಸರಿಸಬೇಕು. 2024ರ ನಾಲ್ಕನೇ ಪರ್ಯಾಯ ವಿಜೃಂಭಣೆಯಿಂದ ನಡೆಯಲು ಹಲವಾರು ಸಮಿತಿಗಳನ್ನು ರಚಿಸಲಾಗಿದೆ. ಇನ್ನೂ ಕೂಡಾ ಸಮಿತಿಗಳಿಗೆ ಸೇರಲು ಅವಕಾಶವಿದ್ದು ಆಸಕ್ತರು ಸೇರಿ ಕೊಳ್ಳಬಹುದು" ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗೌರವಾಧ್ಯಕ್ಷರಾದ ಡಾಕ್ಟರ್ ವಿರೇಂದ್ರ ಹೆಗ್ಗಡೆ ಯವರು "ವಿಶ್ವ ಸಣ್ಣ ಹಳ್ಳಿ ಯಾಗಿದೆ ಎನ್ನುತ್ತೇವೆ, ವಿಶ್ವದ ಯಾವ ಪ್ರದೇಶಕ್ಕೆ ಹೋಗಲೂ ಕೂಡಾ 24 ಗಂಟೆಗಳಲ್ಲಿ ತಲುಪಬಹುದು. ಇಂತಹ ಸಂದರ್ಭದಲ್ಲಿ ಶ್ರೀ ಕೃಷ್ಣ ನ ಸಂದೇಶ ವಿಶ್ವಕ್ಕೆ ಪಸರಿಸುವ ಪರ್ಯಾಯ ಇದಾಗಬೇಕು. ಪೂಜ್ಯ ಶ್ರೀ ಪಾದರು ವಿವಿಧ ಸಮ್ಮೆಳನದಲ್ಲಿ ಭಾಗವಹಿಸಿದ್ದಾರೆ. ವಿಶ್ವದ ವಿವಿಧ ಭಾಗಗಳಲ್ಲಿ ಜಗಳ, ವಿವಿದ ಹಾನಿ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಭಗವಾನ್ ಶ್ರೀ ಕೃಷ್ಣನ ಶಾಂತಿಯ ಸಂದೇಶ ವಿಶ್ವದ ಮೂಲೆ ಮೂಲೆಗೆ ಪಸರಿಸಬೇಕಾಗಿದೆ. ಕೃಷ್ಣನ ಭಗವದ್ಗೀತೆ ಯನ್ನು ಮ್ಯಾನೇಜ್ ಮೆಂಟ್ ಕೋರ್ಸ್ ಆಗಿ ಮಾಡುವಲ್ಲಿ ಕೂಡಾ ಕೆಲಸಗಳು ನಡೆಯುತ್ತಿವೆ. ಉತ್ತರ ಸಿಗದ ಸಮಸ್ಯೆಗಳೇ ಇಲ್ಲ. ವಿಶ್ವದೃಷ್ಟಿ ನಮ್ಮಲ್ಲಿ ಬೆಳೆಯಬೇಕು. ಎಲ್ಲೆಡೆ ಶಾಂತಿ ಸಮೃದ್ದಿ ನೆಲೆಸಲು ಪ್ರಾರ್ಥಿಸೋಣ. ಉಡುಪಿ ಅತಿಥಿ ಸತ್ಕಾರಕ್ಕೆ ಹೆಸರುವಾಸಿ. ಸೌಲಭ್ಯ, ಸೌಕರ್ಯ ನಮಗೆ ಲಭ್ಯವಿದೆ. ನಮ್ಮ ಎಸ್ ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ 25 ಕೊಠಡಿ ಗಳನ್ನು ಅತಿಥಿಗಳ ವಾಸ್ತವ್ಯಕ್ಕಾಗಿ ನೀಡಲಿದ್ದೇವೆ ಮತ್ತು ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಕೂಡಾ ಎಲ್ಲಾ ರೀತಿಯ ಸೇವೆಗೆ ಸಿದ್ದರಾಗಿದ್ದಾರೆ. ಈ ಬಾರಿಯದ್ದು ನಿಜವಾದ ವಿಶ್ವ ಪರ್ಯಾಯವಾಗಲಿ" ಎಂದರು.
ಇದೇ ಸಂಧರ್ಭದಲ್ಲಿ ಡಾಕ್ಟರ್ ವಿರೇಂದ್ರ ಹೆಗ್ಗಡೆ ಯವರು ಪುತ್ತಿಗೆ ಪರ್ಯಾಯ 2024 ರ ಅಧಿಕೃತ ಲಾಂಛನ ಮತ್ತು ಕ್ಯೂ ಆರ್ ಕೋಡ್ ಅನ್ನು ಬಿಡುಗಡೆಗೊಳಿಸಿದರು.
ಈ ಸಂಧರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾಕ್ಟರ್ ವಿರೇಂದ್ರ ಹೆಗ್ಗಡೆ ಯವರಿಗೆ ಗೌರವಾಧ್ಯಕ್ಷ ಸ್ಥಾನದ ಅಧಿಕೃತ ಪತ್ರವನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾಕ್ಟರ್ ಎಚ್ ಎಸ್ ಬಲ್ಲಾಳ್, ಕಾರ್ಯಾಧ್ಯಕ್ಷರಾದ ರಘುಪತಿ ಭಟ್, ಗೌರವ ಕೋಶಾದಿಕಾರಿ ನಾಗೇಶ್ ಹೆಗಡೆ, ಕೋಶಾಧಿಕಾರಿ ರಂಜನ್ ಕಲ್ಕೂರ, ಮಹಾಪೋಷಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಯಶ್ಪಾಲ್ ಸುವರ್ಣ, ಆನೆಗುಡ್ಡೆ ಕ್ಷೇತ್ರದ ಮೊಕ್ತೇಸ್ತರರಾದ ಸೂರ್ಯನಾರಾಯಣ ಉಪಾಧ್ಯಾಯ, ಗೌರವ ಕಾರ್ಯದರ್ಶಿ ಹೇರಂಜೆ ಕೃಷ್ಣ ಭಟ್, ಕಟೀಲು ಕ್ಷೇತ್ರದ ಧರ್ಮಧರ್ಶಿಗಳಾದ ಲಕ್ಷ್ಮೀನಾರಾಯಣ ಅಸ್ರಣ್ಣ ಮತ್ತು ಇತರರು ಉಪಸ್ಥಿತರಿದ್ದರು. ಕೆ ರಮೇಶ್ ಭಟ್ ಕಾರ್ಯಕ್ರಮ ನಿರ್ವಹಿಸಿ, ಪ್ರಸನ್ನ ಆಚಾರ್ ಧನ್ಯವಾದ ಸಮರ್ಪಿಸಿದರು.