ಉಡುಪಿ, ಸೆ 16 (DaijiworldNews/HR): ಚೈತ್ರ ಕುಂದಾಪುರ ಮತ್ತು ಗ್ಯಾಂಗ್ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ಕೋಟ್ಯಾಂತರ ರೂ. ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿ ಉಡುಪಿಯಲ್ಲಿ ಮಹಜರು ಮತ್ತು ರಿಕವರಿ ಮಾಡಿದ್ದಾರೆ.
ಸಿಸಿಬಿ ಪೊಲೀಸರಿಂದ ತನಿಖೆ ಮುಂದುವರೆದಿದ್ದು, ಬೈಂದೂರು ಕುಂದಾಪುರ ಉಡುಪಿ ತಾಲೂಕಿನಲ್ಲಿ ಕಾರ್ಯಾಚರಣೆ ನಡೆಸಿದ್ದು, ಹಣ, ಆಸ್ತಿ ಪತ್ರ, ಜಮೀನು ಖರೀದಿಸಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಸಿಸಿಬಿ ಪೊಲೀಸರು ಆರೋಪಿ ಶ್ರೀಕಾಂತ್ ನಾಯಕ್ ನನ್ನು ಉಪ್ಪುರು ಸೊಸೈಟಿಗೆ ಕರೆ ತಂದು ಸೊಸೈಟಿಯಲ್ಲಿ ಹಣ ಚಿನ್ನ ಆಸ್ತಿ ಪತ್ರ ಇದೆಯ ಎಂದು ತನಿಖೆ ಮಾಡಲಾಗಿದೆ.