ಮಂಗಳೂರು, ಸೆ 16 (DaijiworldNews/HR): ಮೀನ ಕಳಿಯ ತಿರುಗು ರಸ್ತೆಯ ಮದ್ಯೆ ಭಾರಿ ಪ್ರಮಾಣದಲ್ಲಿ ಕಲ್ಲಿದ್ದಲು ತುಂಬಿರುವ ಗೋಣಿ ಬಿಸಾಡಿ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ತುರ್ತು ಕಾರ್ಯಾಚರಣೆ ಕೈಗೊಂಡ ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ವಿಭಾಗೀಯ ಕಚೇರಿಯು ಸಂಬಂಧಿತ ಕಂಪನಿಯ ಆಡಳಿತಕ್ಕೆ 10,000 ದಂಡ ವಿಧಿಸಿ ಸುಮಾರು 250ಕ್ಕೂ ಹೆಚ್ಚು ಕಲ್ಲಿದ್ದಲು ಗೋಣಿ ಚೀಲವನ್ನು ಅವರಿಂದಲೇ ತೆರವುಗೊಳಿಸಿದೆ.
ಸ್ವಚ್ಛತಾ ಆಂದೋಲನ ರಾಷ್ಟ್ರದಾದ್ಯಂತ ನಡೆಯುತ್ತಿರುವಂತೆ ಬೈಕಂಪಾಡಿಯಲ್ಲಿ ಹೆದ್ದಾರಿ ಬದಿಯಲ್ಲಿ ಮಾಲಿನ್ಯ ಉಂಟು ಮಾಡಿದ ಕಂಪನಿಗೆ ಪಾಲಿಕೆ ಸೂಕ್ತ ದಂಡ ವಿಧಿಸಿ ಸ್ವಚ್ಛತೆಯ ಅರಿವು ಮೂಡಿಸಿತು.
ಇನ್ನು ಸುರತ್ಕಲ್ ವಿಭಾಗೀಯ ಆಯುಕ್ತ ವಾಣಿ ಆಳ್ವ ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಈ ಕಾರ್ಯ ನಡೆಸಿತು. ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.