ಉಡುಪಿ, ಸೆ. 15 (DaijiworldNews/SM): ಜನತಾದಳ (ಜಾತ್ಯಾತೀತ) ಇದರ ವರಿಷ್ಟರಾದ ಎಚ್ ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಯವರು ಕೈಗೊಂಡಿರುವ ನಿರ್ಧಾರಕ್ಕೆ ಉಡುಪಿ ಜಿಲ್ಲಾ ಘಟಕ ಸಂಪೂರ್ಣ ಬದ್ದವಾಗಿದ್ದು, ಪಕ್ಷದ ಹಿತದೃಷ್ಟಿಯಿಂದ ಪಕ್ಷದ ವರಿಷ್ಡರು ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ದ” ಎಂದು ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು “ಸೆಪ್ಟೆಂಬರ್ 10 ರಂದು ಬೆಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ವರಿಷ್ಟರಾದ ಎಚ್ ಡಿ ದೇವೆಗೌಡ ಮತ್ತು ಎಚ್ ಡಿ ಕುಮಾರಸ್ವಾಮಿ ಅವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಕ್ಷದ ಹಿತದೃಷ್ಟಿಯಿಂದ ಬಿಜೆಪಿ ಯೊಂದಿಗೆ ಮೈತ್ರಿ ಬಗ್ಗೆ ನಿರ್ಣಯ ತೆಗೆದುಕೊಂಡಿದ್ದಾರೆ. ಇದಕ್ಕೆ ಜೆಡಿಎಸ್ ಉಡುಪಿ ಘಟಕ ಕೂಡಾ ಸರ್ವಾನುಮತದ ನಿರ್ಣಯ ಕೈಗೊಂಡಿದ್ದು ಇದನ್ನು ಕೇಂದ್ರ ಕಚೇರಿಗೆ ಕಳುಹಿಸುತ್ತೆವೆ. ಇ ಹಿನ್ನಲೆಯಲ್ಲಿ ಸೆಪ್ಟೆಂಬರ್ 26 ರಿಂದ ಕೋರ್ ಕಮಿಟಿ ಅಧ್ಯಕ್ಷರಾದ ದೇವೆಗೌಡರ ನೇತೃತ್ವದಲ್ಲಿ ಕೋರ್ ಕಮಿಟಿ ಸದಸ್ಯರನ್ನೊಳಗೊಂಡು ಗುಲ್ಬರ್ಗ ಡಿವಿಜನ್ ನಿಂದ ಪ್ರಾರಂಭಗೊಂಡು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆಯನ್ನು ನಡೆಸಿ ಪಕ್ಷವನ್ನು ಪುನರ್ ಸಂಘಟನೆ ಮಾಡಲಾಗುತ್ತದೆ" ಎಂದರು.
"ಕಾಂಗ್ರೆಸ್ ಬಡಜನರಿಗೆ ನೀಡುತ್ತಿರುವ ಸೌಲಭ್ಯಗಳ ಕುರಿತು ನಮಗೆ ಏನೂ ಅಭ್ಯಂತರ ಇಲ್ಲ. ಆದರೆ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭ ವೇ ಆಗಿಲ್ಲ ಇದರಿಂದಾಗಿ ಸಂಕಷ್ಟ ಎದುರಾಗಿದೆ. ಗೃಹಲಕ್ಷ್ಮಿ ಯ ಜೊತೆಗೆ ದರಿದ್ರಲಕ್ಷ್ಮಿ ನಮ್ಮ ರಾಜ್ಯಕ್ಕೆ ಬರದೇ ಇರಲಿ ಎಂಬುವುದು ನಮ್ಮ ಬೇಡಿಕೆ" ಎಂದರು.
"ಐಎನ್ಡಿಐಎ ಯಲ್ಲಿರುವ ನಿತೀಶ್ ಕುಮಾರ್ ಬಿಜೆಪಿ ಜೊತೆ ಸರಕಾರ ಮಾಡಿದವರು ಆದರೆ ಇದೀಗ ಐಎನ್ಡಿಐಎ ಯವರು ಅವರನ್ನು ಒಪ್ಪಿದ್ದಾರೆ. ರಾಜಕೀಯದ ಬದಲಾದ ಸನ್ನಿವೇಶದಲ್ಲಿ ಸೂಕ್ತ ನಿರ್ದಾರ ಬೇಕು. ರಾಮಕೃಷ್ಣ ಹೆಗಡೆ ಯವರ ಕಾಲದಿಂದಲೂ ಬಿಜೆಪಿಯೊಂದಿಗೆ ಸರಕಾರ ರಚನೆ ಮಾಡಿದ್ದಾರೆ. ೨೦೨೦ ಬಿಜೆಪಿ ಯೊಂದಿಗೆ ಮೈತ್ರಿ ಸರಕಾರ ಮಾಡಿದ್ದೆವೆ, ಆ ಸಂಧರ್ಭದಲ್ಲಿ ಕೂಡಾ ಅಲ್ಪಸಂಖ್ಯಾತ ರಿಗೆ ಕೂಡಾ ನೆಮ್ಮದಿಯ ಜೀವನವನ್ನು ಕುಮಾರಸ್ವಾಮಿ ನೀಡಿದ್ದಾರೆ. ನಾವು ನಮ್ಮ ತತ್ವಗಳಿಗೆ ಬದ್ದರಾಗಿ ಇರುತ್ತೆವೆ" ಎಂದು ಯೋಗೀಶ್ ಶೆಟ್ಟಿ ಹೇಳಿದರು.