ಮಂಗಳೂರು, ಸೆ 15 (DaijiworldNews/HR): ಕೊರ್ಡೆಲ್ ಕ್ಷೇತ್ರವೆಂದೇ ಹೆಸರಾಗಿರುವ ಕುಲಶೇಖರದ ಹೋಲಿಕ್ರಾಸ್ ಧರ್ಮ ಕೇಂದ್ರದ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕೃತಜ್ಞತಾ ಬಲಿಪೂಜೆ ಗುರುವಾರ ಧರ್ಮಕೇಂದ್ರದಲ್ಲಿ ನಡೆಯಿತು.
ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಠ ಧರ್ಮಗುರು ಮೊ| ಮ್ಯಾಕ್ಸಿಮ್ ನೊರೊನ್ಹಾ ಕೃತಜ್ಞತಾ ಬಲಿಪೂಜೆ ನೆರವೇರಿಸಿ, ದೇವರ ವಾಕ್ಯವನ್ನು ಬೋಧಿಸಿದರು. ಪವಿತ್ರ ಶಿಲುಬೆ (ಹೋಲಿ ಕ್ರಾಸ್)ಯ ಆಶೀರ್ವಾದ ಕೋರಿದರು.
ಪ್ರಧಾನ ಧರ್ಮಗುರು ವಂ| ಕ್ಲಿಫರ್ಡ್ ಫೆರ್ನಾಂಡಿಸ್, ಸಹಾಯಕ ಧರ್ಮಗುರುಗಳಾದ ವಂ| ಐವನ್ ಡಿ'ಸೋಜಾ ಜತೆಗಿದ್ದರು. ಚರ್ಚ್ ಪಾಲನಾ ಸಮಿತಿಯ ಸದಸ್ಯರು, ವಿವಿಧ ಧರ್ಮಗುರುಗಳು, ಭಗಿನಿಯರು, ಅಧಿಕ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
ಇನ್ನು ಧರ್ಮಕೇಂದ್ರದಲ್ಲಿ ಸೇವೆ ನೀಡಿದ ಮುಖ್ಯಸ್ಥರು, ಕಾರ್ಯ ದರ್ಶಿಗಳು, ವಾರ್ಡ್ ಮುಖ್ಯಸ್ಥರ ಹಾಗೂ ಬೆನೆಫ್ಯಾಕ್ಟರ್ ಗಳ ಸಹಿತ 206 ಮಂದಿಯನ್ನು ಸಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ, ಸನ್ಮಾನ ನೆರವೇರಿಸಿದ ಮೊ ಮ್ಯಾಕ್ಸಿಮ್ ನೊರೊನ್ಹಾ ಅವರು, ಕೇಂದ್ರಕ್ಕಾಗಿ ಸೇವೆ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ, ಸೇವೆಯನ್ನು ಮುಂದುವರಿಸುವಂತೆ ಕೋರಿದರು. ಮುಂದಿನ ದಿನಗಳಲ್ಲಿ ಹೋಲಿ ಕ್ರಾಸ್ ಚರ್ಚ್ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ಪ್ರಮುಖ ಧಾರ್ಮಿಕ ಯಾತ್ರಾ ಸ್ಥಳವಾಗಲಿ ಎಂದು ಹಾರೈಸಿದರು. ಸಮ್ಮಾನಿತರ ಪರವಾಗಿ ರಿಚರ್ಡ್ ಆಳ್ವಾರಿಸ್ ಮಾತನಾಡಿದರು.
ಚರ್ಚ್ 21 ಕಮಿಷನ್ಗಳ ಸಂಚಾಲಕ ಡೋಲ್ಫಿ ಡಿಸೋಜಾ, ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟಲಿನೋ, ಮಾಧ್ಯಮ ಸಂಯೋಜಕ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರೂತ್ ಕ್ಯಾಸ್ತೆಲಿನೋ ಸ್ವಾಗತಿಸಿದರು. ಕಾರ್ಯದರ್ಶಿ ಅನಿಲ್ ಡೇಸಾ ವಂದಿಸಿದರು. ರೆನಿಟಾ ಅರನ್ಹಾ ನಿರ್ವಹಿಸಿದರು.