ಕಾರ್ಕಳ, ಸೆ 15 (DaijiworldNews/MS): ಸಿಮೆಂಟ್ ಡೀಲರ್ಶಿಪ್ ನೀಡುವ ನೆಪದಲ್ಲಿ ವ್ಯವಹಾರ ಕುದುರಿಸಿದ ವ್ಯಕ್ತಿಗಳು ಕಾರ್ಕಳದ ಜೋಡುರಸ್ತೆ ವ್ಯಾಪಾರಿಯೊಬ್ಬರಿಗೆ ಲಕ್ಷಾಂತರ ರೂ. ಪಂಗನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಜೋಡುರಸ್ತೆಯಲ್ಲಿ ಸೌಮ್ಯ ಹಾರ್ಡ್ ವೇರ್ ವ್ಯವಹಾರ ನಡೆಸುತ್ತಿರುವ ಶರತ್ ಆಚಾರ್ಯ ಎಸಿಸಿ ಸಿಮೆಂಟ್ನ ಡೀಲರ್ಶಿಪ್ ಪಡೆಯುವ ಬಗ್ಗೆ ಗೂಗಲ್ನಲ್ಲಿ ಹುಡುಕಾಡಿದ್ದರು.ಎಸಿಸಿ ಲಿಮಿಟೆಡ್ ಎಂಬ ವೆಬ್ ಸೈಟಿನಲ್ಲಿ ದೊರೆತ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದರು.
2023 ಸಪ್ಪೆಂಬರ್ 03 ರಂದು ಫಿರ್ಯಾದುದಾರ ಶರತ್ ಆಚಾರ್ಯ ಅವರ ತಂದೆಯ ಮೊಬೈಲ್ ಗೆ ಕರೆ ಬಂದಿದ್ದು, ಸಿಮೆಂಟ್ ವ್ಯವಹಾರದ ಕುರಿತು ಸಂಭಾಷಣೆ ನಡೆಸಲಾಗಿತ್ತು.ಅದರ ಮುಂದುವರಿದ ಭಾಗವಾಗಿ ಎರಡು ದಿನದ ಬಳಿಕ ಸಪ್ಪೆಂಬರ್ 05 ರಂದು ಮಧ್ಯಾಹ್ನ ದೂರುದಾರರ ಖಾತೆ ಇರುವ ಕೆನರಾ ಬ್ಯಾಂಕ್ ಕುಕ್ಕುಂದೂರು ಶಾಖೆಯ ಖಾತೆ ಮೂಲಕ ಡೀಲರ್ ಶಿಪ್ ಮತ್ತು ರಿಜಿಸ್ಟ್ರೇಷನ್ ಶುಲ್ಕ ರೂ. 1,25,000 ನೆಫ್ಟ್ ಮೂಲಕ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಮುಂಬಯಿಯ ಅಂಧೇರಿ ಈಸ್ಟ್ ಬ್ರಾಂಚ್ನ ಖಾತೆ ಶರತ್ ಆಚಾರ್ಯ ಪಾವತಿಸಿರುತ್ತಾರೆ.
ನಂತರ ಆತನು ತಿಳಿಸಿದಂತೆ 1000 ಚೀಲ ಸಿಮೆಂಟ್ ಆರ್ಡರ್ ಮಾಡಲು ರೂ 3,36,000 ರೂ ಪಾವತಿಸಲು ತಿಳಿಸಿದಂತೆ ಹಣ ಪಾವತಿಸಲು ಪ್ರಯತ್ನಿಸಿದ್ದು ತಾಂತ್ರಿಕ ತೊಂದರೆಯಿಂದ ಹಣ ಪಾವತಿ ಆಗಿರುವುದಿಲ್ಲ.
ಮೊಬೈಲ್ ಕರೆ ಮಾಡಿದ ಅಪಾದಿತನು ಎಸಿಸಿ ಸಿಮೆಂಟ್ ಡೀಲರ್ ಶಿಪ್ ಕೊಡಿಸುವುದಾಗಿ ಫಿರ್ಯಾದುದಾರರ ಶರತ್ ಆಚಾರ್ಯ ಅವರನ್ನು ನಂಬಿಸಿ ಹಣವನ್ನು ಪಡೆದು ಮೋಸ ಮಾಡಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.