ಕಾರ್ಕಳ, ಸೆ 15(DaijiworldNews/MS): ಸಾಣೂರು ಗ್ರಾಮ ಪಂಚಾಯ್ತಿಯ ಘನ ದ್ರವ ಸಂಪನ್ಮೂಲ ಘಟಕ(slrm) ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ವ್ಯವಸ್ಥೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ರಾಜ್ಯ ಮತ್ತು ರಾಷ್ಟ್ರ ಗಮನ ಸೆಳೆದಿದೆ. ಸ್ವಚ್ಛತಾ ನಿರ್ವಹಣೆಯಲ್ಲಿ ರಾಷ್ಟ್ರ ಪ್ರಶಸ್ತಿ ಸ್ಪರ್ಧೆಗೆ ಉಡುಪಿ ಜಿಲ್ಲೆಯಲ್ಲಿ ಆಯ್ಕೆಯಾದ 3 ಪಂಚಾಯಿತಿ ಗಳಲ್ಲಿ ಸಾಣೂರು ಕೂಡ ಒಂದಾಗಿರುತ್ತದೆ.
ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಲು ಬೆ೦ಗಳೂರಿನ ಸಾಹಸ್ ಎಂಬ ಎನ್ ಜಿ ಎ ಸಂಸ್ಥೆ ವಿಶೇಷ ಸಹಕಾರ ನೀಡಿದ್ದು, ಇದೀಗ ಹಿಮಾಚಲ ಹಾಗೂ ಉತ್ತರಾಖಂಡದ ಎನ್ ಜಿ ಎ ಸಂಸ್ಥೆಯ ಸ್ವಯಂಸೇವಕರು ಸ್ಥಳಿಯ ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದುಘನ ದ್ರವ ಸಂಪನ್ಮೂಲ ಘಟಕ (slrm) ಘಟಕಕ್ಕೆ ಹಾಗೂ ಕೆಲವು ಮನೆಗಳಿಗೆ ಭೇಟಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷ ಯುವರಾಜ್ ಜೈನ್ ವಹಿಸಿದ್ದರು,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಖಾ ಸ್ವಾಗತಿಸಿದರು. ಪಂಚಾಯತ್ ಸದಸ್ಯ ಕರುಣಾಕರ್ ಎಸ್ ಕೋಟ್ಯಾನ್ ತಾಲೂಕು ಪಂಚಾಯತ್ ನಿಕಟ ಪೂರ್ವ ಸದಸ್ಯ ಪ್ರವೀಣ್ ಕೋಟ್ಯಾನ್, ಪಂಚಾಯತ್ ಮಾಜಿ ಉಪಾಧ್ಯಕ್ಷ ಪ್ರಸಾದ್ ಪೂಜಾರಿ ಮಾಹಿತಿ ವಿನಿಮಯ ನಡೆಸಿದರು.
ಪಂಚಾಯತ್ ಉಪಾಧ್ಯಕ್ಷೆ ಯಶೋದಾ ಶೆಟ್ಟಿ, ಪಂಚಾಯತ್ ಕಾರ್ಯದರ್ಶಿ ಸವಿತಾ ಪ್ರಭು ಪಂಚಾಯತ್ ಸದಸ್ಯರಾದ ಸತೀಶ್, ಸುಮತಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸಾಹಸ್ ಸಂಸ್ಥೆಯ ಪ್ರಮುಖರಾದ ಕಾರ್ತಿಕ್ ಹಾಗೂ ಅವಿನಾಶ್ ಕಾರ್ಯಕ್ರಮದ ನೇತೃತ್ವ ವಹಿಸಿ ತಂಡಕ್ಕೆ ಮಾರ್ಗದರ್ಶನ ನೀಡಿದರು.