ಸುಳ್ಯ, ಸೆ 10 (DaijiworldNews/HR): ಹಾಲು ಸಾಗಾಟದ ಟ್ಯಾಂಕರ್ ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ಪಡ್ಪಿನಂಗಡಿಯಲ್ಲಿ ಸೆ.10ರಂದು ವರದಿಯಾಗಿದೆ.
ಎಡಮಂಗಲ, ಏನೆಕಲ್ಲು,ಪಂಜ ಬಿ.ಎಂ.ಸಿ ಗಳಿಂದ ಹಾಲು ಶೇಖರಿಸಿ ಸಾಗಾಟ ಮಾಡುತ್ತಿದ್ದ ನಂದಿನಿ ಹಾಲಿನ ಟ್ಯಾಂಕರ್ ಸುಬ್ರಹ್ಮಣ್ಯ -ಮಂಜೇಶ್ವರ ರಾಜ್ಯ ಹೆದ್ದಾರಿಯ ಪಡ್ಪಿನಂಗಡಿಯಲ್ಲಿ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ್ದು, ಚಾಲಕನಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಟ್ಯಾಂಕರಿನಲ್ಲಿರುವ ಹಾಲು ಸುರಿಕ್ಷಿತವಾಗಿರುವುದಾಗಿ ತಿಳಿದು ಬಂದಿದೆ.