ಸುಳ್ಯ,ಏ10(AZM): ಸುಳ್ಯ ತಾಲೂಕಿನ ಬೆಳ್ಳರೆ ಠಾಣೆ ವ್ಯಾಪ್ತಿಯ ಸೋಮಲಿಂಗಪ್ಪ ಎಂಬವರ ಮನೆಯೊಂದರಿಂದ ಆಭರಣಗಳನ್ನು ದೋಚಿ ಪರಾರಿಯಾಗಿದ್ದ ಕಳ್ಳನನ್ನು ಬಂಧಿಸುವಲ್ಲಿ ಬೆಳ್ಳಾರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಚಿತ್ರದುರ್ಗದ ಶಿವಮೂರ್ತಿ ಅಲಿಯಾಸ್ ಶಿವಪ್ಪ(34) ಎಂದು ಗುರುತಿಸಲಾಗಿದೆ. ಸೋಮಲಿಂಗಪ್ಪ ಎಂಬವರ ನಿವಾಸದಿಂದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ನಗದು ಸೇರಿ ಒಟ್ಟು 24,750 ರೂಪಾಯಿ ಮೌಲ್ಯದ ಸ್ವತ್ತನ್ನು ದೋಚಿ ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಏ.10 ರ ಬುಧವಾರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಕಳ್ಳತನವೆಸಗಿದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪ್ರೋಬೇಷನರಿ ಪಿಎಸ್ಐ ಆಂಜನೇಯರೆಡ್ಡಿ,ಎಎಸ್ಐ ಸುಧಾಕರ,ಹೆಡ್ ಕಾನ್ಸಟೇಬಲ್ ಗಳಾದ ನವೀನ, ˌಸತೀಶˌಬಾಲಕೃಷ್ಣ, ಕಾನ್ಸಟೇಬಲ್ ಆದ ಮಂಜುನಾಥ ಎಸ್ ಎಚ್ ಹಾಗೂ ಪಿಎಸ್ಐ ಡಿ.ಎನ್. ಈರಯ್ಶ ಮತ್ತು ಸಿಬ್ಬಂದಿ ಗಳು ಪಾಲ್ಗೊಂಡಿದ್ದರು.