ಸುಳ್ಯ,ಸೆ 09 (DaijiworldNews/Ak): ಉದ್ಯಮಿ ಯೊಬ್ಬರು ಬುಲೆಟ್ ಬೈಕ್ನಲ್ಲಿ ಪತ್ನಿ,ಮೂರೂವರೆ ವರ್ಷದ ಮಗುವಿನೊಂದಿಗೆ ವಿಶ್ವದ ಅತಿ ಎತ್ತರದ ಉಮ್ಲಿಂಗ್ ಪ್ರದೇಶ ತಲುಪುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
ಇವರು ಸುಳ್ಯದ ಹಳೆಗೇಟಿನ ತೌಹೀದ್ ರೆಹ್ಮಾನ್ ಅವರು ಪತ್ನಿ ಜಶ್ಮಿಯಾ ಮತ್ತು ಮಗ ಜಝೀಲ್ ರೆಹ್ಮಾನ್ ಅವರು ಬುಲೆಟ್ನಲ್ಲಿ ಉಮ್ಮಿಂಗ್ ಲಾ ತೆರಳಿದ್ದರೂ.
ಸುಮಾರು 19,024 ಅಡಿ ಎತ್ತರದ ಮತ್ತು ಆಮ್ಲಜನಕದ ಮಟ್ಟವು 50 ಶೇ. ಕ್ಕಿಂತ ಕಡಿಮೆ ಇರುವ ಈ ಸ್ಥಳಕ್ಕೆ ರೆಹ್ಮಾನ್ ಬೈಕ್ನಲ್ಲಿ ತಲುಪಿದ ಅತ್ಯಂತ ಕಿರಿಯವರು ಎನಿಸಿಕೊಂಡಿದ್ದಾರೆ. ಇಂಡಿಯಾ ರೆಕಾರ್ಡ್ ಬುಕ್ನಲ್ಲಿ ಈ ದಾಖಲೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.
ಲಡಾಕ್ನ ಚೀನದ ಗಡಿಯಲ್ಲಿರುವ ಉಮ್ಲಿಂಗ್ ಲಾ ವಿಶ್ವದ ಅತೀ ಎತ್ತರದ ಮೋಟಾರು ರಸ್ತೆಯಾಗಿದ್ದು, 52 ಕಿ.ಮೀ. ರಸ್ತೆಯಾಗಿದ್ದು, ಇದು ಗಡಿ ನಿಯಂತ್ರಣ ರೇಖೆಯಲ್ಲಿದ್ದು, ಭಾರತ ಮತ್ತು ಚೀನ ನಡುವಿನ ಘರ್ಷಣೆಯ ಬಿಂದುವಾಗಿದೆ.
ರೆಹ್ಮಾನ್ ಅವರು ಆ.15ರಂದು ಸುಳ್ಯದಿಂದ ಹೊರಟಿದ್ದ ರೆಹ್ಮಾನ್ 19 ದಿನಗಳಲ್ಲಿ ಉಮ್ಮಿಂಗ್ ಲಾ ತಲುಪಿದ್ದಾರೆ. ಅಲ್ಲಿ ರಾಷ್ಟ್ರಧ್ವಜ, ಕನ್ನಡ ಧ್ವಜ, ತುಳುನಾಡಿನ ಬಾವುಟವನ್ನು ಹಾರಿಸಿದ್ದಾರೆ. 5 ಸಾವಿರ ಕಿ.ಮೀ. ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಉಮ್ಮಿಂಗ್ ಲಾ ತಲುಪಿದ ತತ್ಕ್ಷಣ ಆರ್ಮಿ ಅಧಿಕಾರಿಗಳು ತಮ್ಮನ್ನು ಸ್ವಾಗತಿಸಿದರು. ಮತ್ತು ತಮ್ಮ ಸಾಹಸದ ಬಗ್ಗೆ ಅವರು ಅಭಿನಂದಿಸಿದರು ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ರೆಹ್ಮಾನ್ ಕಾರಿನಲ್ಲಿ ಸ್ನೇಹಿತರೊಂದಿಗೆ ಹಿಮಾಚಲ ಪ್ರದೇಶ, ಶ್ರೀನಗರ, ಆರು ಬಾರಿ ಲಡಾಕ್ಗೆ ಸುತ್ತಿದ್ದರು. ಇದೀಗ ಉಮ್ಮಿಂಗ್ ಲಾಕ್ಕೆ ಮೊದಲ ಬಾರಿ ಬೈಕ್ನಲ್ಲಿ ಸಾಹಸ ಯಾತ್ರೆ ಕೈಗೊಂಡಿದ್ದು ಯಶ್ವಸ್ಸಿಯಾಗಿದ್ದಾರೆ.
ಈ ಹಿಂದೆ ಬೈಕ್ನಲ್ಲಿ 9 ವರ್ಷದ ಬಾಲಕನೊಂದಿಗೆ ಕೋಲ್ಕತಾದ ದಂಪತಿ ಉಮ್ಮಿಂಗ್ ಲಾ ತಲುಪಿದ್ದರು. ಇದು ದಾಖಲೆಯಾಗಿತ್ತು. ಈ ದಾಖಲೆಯನ್ನು ರೆಹ್ಮಾನ್ ದಂಪತಿ ಮೂರು ವರ್ಷದ ಬಾಲಕನೊಂದಿಗೆ ತೆರಳಿ ದಾಖಲೆ ಮುರಿದಿದ್ದಾರೆ ಎನ್ನಲಾಗಿದೆ.