ಮಂಗಳೂರು, ಸೆ 08 (DaijiworldNews/MS): ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಾದ್ಯಂತ ಗುರುವಾರ ಕ್ರೈಸ್ತರು ಮೊಂತಿ ಹಬ್ಬವನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸಲಾಗುತ್ತಿದೆ.
ದೇವಪುತ್ರ ಏಸುಕ್ರಿಸ್ತರಿಗೆ ಭೂಮಿಯ ಅವತಾರಕ್ಕೆ ಅವಕಾಶ ಕಲ್ಪಿಸಿದ ಮಹಾಮಾತೆ ಮೇರಿಯಮ್ಮನ ಜನ್ಮದಿನವಾಗಿದ್ದು, ಈ ಹಿನ್ನಲೆಯಲ್ಲಿ ಚರ್ಚ್ ಗಳಲ್ಲಿ ಬಲಿ ಪೂಜೆ, ಹೊಸತೆನೆ ವಿತರಣೆ, ಮೆರವಣಿಗೆ, ಪುಷ್ಪಾರ್ಚನೆ ಮೂಲಕ ಮೇರಿ ಮಾತೆಗೆ ನಮನ ಮುಂತಾದ ಧಾರ್ಮಿಕ ವಿಧಿಗಳು ನಡೆಯಲಿದೆ.
ದೇವ ಮಾತೆ ಎಂದೇ ಕರೆಯಲ್ಪಡುವ ಮೇರಿ ಮಾತೆಯ ಜನ್ಮದಿನವನ್ನು ಪ್ರಕೃತಿಯು ನೀಡಿರುವ ಕೊಡುಗೆಗಳಿಗಾಗಿ ಕೃತಜ್ಞತೆ ಸಲ್ಲಿಸುವ ದಿನವಾಗಿ ಮೊಂತಿ ಫೆಸ್ತ್ ಆಚರಿಸುವುದು ಈ ದಿನದ ವಿಶೇಷ. ಈ ಹಬ್ಬದಲ್ಲಿ ಹೊಸ ತೆನೆ, ನಾನಾ ಬಗೆಯ ಹೂವು, ಸಸ್ಯಹಾರಿ ಖಾದ್ಯಗಳಿಗೆ ವಿಶೇಷ ಆದ್ಯತೆ ಇರಲಿದೆ
ಮೊಂತಿ ಫೆಸ್ತ್ ನ ಪೂರ್ವಭಾವಿಯಾಗಿ ಇಗರ್ಜಿಗಳಲ್ಲಿಒಂಬತ್ತು ದಿನಗಳ ನೊವೆನಾ ನಡೆಯುತ್ತದೆ. ಈ ಒಂಬತ್ತು ದಿನಗಳಲ್ಲಿದೇವಾಲಯಗಳಲ್ಲಿಬಲಿಪೂಜೆ, ನೊವೆನಾ ನಡೆಯುತ್ತದೆ. ಮಾತೆ ಮೇರಿಗೆ ಪುಷ್ಪಗಳನ್ನು ಅರ್ಪಿಸಿ ಗಾಯನಗಳೊಂದಿಗೆ ಸ್ತುತಿಸಲಾಗುತ್ತದೆ.