ಮಂಗಳೂರು,ಏ10(AZM):ಮೋದಿ ಮೋದಿ ಅನ್ನೋರು ಕೂಡಾ ಸಿದ್ಧರಾಮಯ್ಯನವರ ಅನ್ನಭಾಗ್ಯದ ಅನ್ನವನ್ನೇ ಉಣ್ಣುತ್ತಿರುವುದು ಎಂದು ಮಾಜಿ ಸಚಿವರಾದ ರಮಾನಾಥ ರೈ ಹೇಳಿದ್ದಾರೆ.
ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಬಿಜೆಪಿಯ ಭರವಸೆ ವರುಷಕ್ಕೆ ಆರು ಸಾವಿರ ಆದರೆ ಕಾಂಗ್ರೆಸ್ ವರುಷಕ್ಕೆ 72 ಸಾವಿರ ಕೊಡಲಿದೆ ಎಂದು ಹೇಳಿದರು.
ವಿಜಯಬ್ಯಾಂಕ್ ವಿಲೀನ ಕುರಿತು ಮಾತನಾಡಿದ ಅವರು, ವಿಜಯಾ ಬ್ಯಾಂಕ್ ವಿಲೀನಕ್ಕೆ ಮನಮೋಹನ್ ಸಿಂಗ್ ಸರಕಾರವೇ ಕಾರಣ ಎಂದು ಹೇಳುತ್ತಾರೆ. ಆದರೆ ಆಗಲೂ ಜಿಲ್ಲೆಯಲ್ಲಿ ಬಿಜೆಪಿಯ ನಳಿನ್ ಅವರೇ ಸಂಸದಾರಿಗದ್ದರು ಅವರು ವಿರೋಧ ಪಕ್ಷದಲ್ಲಿದ್ದು ಇದನ್ನು ವಿರೋಧಿಸಬಹುದಿತ್ತು ಆದರೆ ಅವರು ಅದನ್ನು ಯಾಕೆ ಮಾಡಿಲ್ಲ. ಬಿಜೆಪಿ ಈಗಾ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಅವರಿಗೂ ಹೆಚ್ಚಿನ ಜವಾಬ್ದಾರಿ ಇತ್ತು. ಆದರೆ ಜಿಲ್ಲೆಯ ಯೋಜನೆಗಳನ್ನು ಬೇರೆಡೆ ಸ್ಥಳಾಂತರ ಮಾಡಿರೋದೆ ಬಿಜೆಪಿ ಸಂಸದರ ಸಾಧನೆ ಎಂದು ಹೇಳಿದರು.
ಕಾಂಗ್ರೆಸ್ ಯಾವತ್ತೂ ಬಡವರಿಗೆ ಅನ್ಯಾಯ ಮಾಡಿಲ್ಲ. ಯಾವ ಯೋಜನೆಗೆ ಹೇಗೆ ಹಣ ಬಂತು ಅನ್ನೋದು ಬಿಜೆಪಿಗೆ ಗೊತ್ತಿಲ್ಲ.ಆದ್ರೆ ಬ್ಯಾನರ್ ಮಾತ್ರ ಅವರೇ ಹಾಕಿಕೊಳ್ಳುತ್ತಾರೆ ಎಂದ ಅವರು ಕಾಂಗ್ರೆಸ್ ಗೆ ದೇಶದ ಮಹತ್ವ ಗೊತ್ತಿದೆ.ನೆಹರೂ 14 ವರುಷ ಜೈಲಿಗೆ ಹೋಗಿದ್ದು ಪ್ರಧಾನಿಯಾಗ್ತೀನಿ ಅಂತಲ್ಲ.ಆದರೆ ಮೋದಿಯವರು ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.