ಉಡುಪಿ, ಸೆ 07 (DaijiworldNews/MS): ಕೃಷ್ಣಜನ್ಮಾಷ್ಟಮಿಯ ಪರ್ವ ಕಾಲದಲ್ಲಿ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಶ್ರೀಪಾದರು ಅರ್ಘ್ಯ ಪ್ರಧಾನ ನಡೆಸಿ ಕೃಷ್ಣ ಜನ್ಮಾಷ್ಟಮಿಯ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.
ಅರ್ಘ್ಯ ಪ್ರಧಾನದ ಈ ವೇಳೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಮಠಕ್ಕೆ ಭೇಟಿ ನೀಡಿ, ಶ್ರೀ ಕೃಷ್ಣನ ದರ್ಶನ ಪಡೆದರು.. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಜೊತೆಗಿದ್ದರು.
ಪರ್ಯಾಯ ಕೃಷ್ಣಪುರ ಮಠಾಧೀಶರಿಂದ ಕೃಷ್ಣದೇವರಿಗೆ ಅರ್ಘ್ಯ ಪ್ರದಾನ ನಡೆಸಿ ಕೃಷ್ಣದೇವರ ಹುಟ್ಟನ್ನು ಸಂಭ್ರಮದಿಂದ ಆಚರಿಸಲಾಯಿತು. ಕೃಷ್ಣದೇವರಗುಡಿಯಲ್ಲಿ ಮತ್ತು ಗುಡಿಯ ಎದುರಿನ ತುಳಸಿ ಕಟ್ಟೆಯಲ್ಲಿ ಅರ್ಘ್ಯ ಪ್ರಧಾನದ ವಿಧಿ ವಿಧಾನಗಳು ನಡೆದವು. ಈ ಸಂಧರ್ಭದಲ್ಲಿ ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ತೀರ್ಥರ ಶ್ರೀಪಾದರು,ಶಿರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರು ಕೂಡಾ ಉಪಸ್ಥಿತರಿದ್ದರು.
ಶ್ರೀಪಾದರು ಅರ್ಘ್ಯ ಪ್ರಧಾನ ಮಾಡಿದ ಬಳಿಕ ಹಗಲಿಡಿ ಉಪವಾಸವಿದ್ದ ನೂರಾರು ಭಕ್ತರು ಕೂಡಾ ಅರ್ಘ್ಯ ಪ್ರಧಾನ ನಡೆಸಿದರು.ಶಂಖದ ಮೂಲಕ ಹಾಲು ಹಾಗೂ ನೀರಿನ ಆರ್ಘ್ಯ ಪ್ರಧಾನ.
ಸೆಪ್ಟೆಂಬರ್ 7 ರಂದು ಶ್ರೀ ಕೃಷ್ಣ ಲೀಲೋತ್ಸವದ ಪ್ರಯುಕ್ತ ವಿಟ್ಲಪಿಂಡಿ ಆಚರಣೆ ನಡೆಯಲಿದ್ದು ಮಧ್ಯಾಹ್ನಾನದ ನಂತರ ನಡೆಯುವ ಉತ್ಸವದಲ್ಲಿ ಸಾವಿರಾರು ಮಂದಿ ಭಾಗಿಯಾಗಲಿದ್ದಾರೆ. ಬೆಳಗ್ಗಿನೆಂದಲೇ ಸಾವಿರಾರು ಜನರಿಗೆ ಭೋಜನ ಪ್ರಸಾದ ವಿತರಣೆ ಕೂಡಾ ನಡೆಯಲಿದ್ದು , ಆರ್ಘ್ಯ ಪ್ರಧಾನದ ವೇಳೆ ದೇವರಿಗೆ ಸಮರ್ಪಿಸಿದ ಉಂಡೆ ಚಕ್ಕುಲಿಯನ್ನು ಭಕ್ತರಿಗೆ ವಿತರಣೆ ಮಾಡಲಾಗುವುದು.