ಕಾರ್ಕಳ, ಏ 10(MSP): ಐಪಿಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಹಣ ಸಂಗ್ರಹಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಹಾಲ್ಮೂರ್ತಿ ಬಂಧಿಸಿದ್ದಾರೆ.
ಶಿವಮೊಗ್ಗದ ಹೊಸನಗರದ ಎಂ.ಸಿ.ಶೇಖರಪ್ಪ ಬಂಧಿತನಾಗಿದ್ದಾನೆ. ಮಂಗಳೂರಿನ ಮೆಲ್ವಿನ್ ವಿಶ್ವಾಸ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಪೊಲೀಸ್ ಕಾರ್ಯಚರಣೆಯ ಸಂದರ್ಭದಲ್ಲಿ ಈತ ಬಲೆಗೆ ಬಿದ್ದಿದ್ದು ಇತನೊಂದಿಗೆ ಬೆಟ್ಟಿಂಗ್ ಜೂಜಾಟದಲ್ಲಿ ನಿರತರಾಗಿದ್ದ ವಿಶ್ವನಾಥ,ಸಂತೋಷ್ ಟಿಂಬರ್, ಟೋನಿ, ಇಕ್ಬಾಲ್ ಬಜಗೋಳಿ, ಭಾಸ್ಕರ್ ಜಾರ್ಕಳ, ಮುರಳಿ ಜೋಡುರಸ್ತೆ, ಹುಸೈನ್ ಜೋಡುರಸ್ತೆ, ಶಾಂತಾರಾಮ ಸಾಣೂರು ಪರಾರಿಯಾಗಿರುವ ಇತರ ಆರೋಪಿತರು.
ಪ್ರಕರಣದ ಪ್ರಮುಖ ಆರೋಪಿ ಮೆಲ್ವಿನ್ ವಿಶ್ವಾಸ ಎಂಬಾತನು ಎಂ.ಸಿ. ಶೇಖರಪ್ಪನಿಗೆ ಬೆಟ್ಟಿಂಗ್ ಹಣ ಸಂಗ್ರಹದಲ್ಲಿ ಕಮಿಷನ್ ನೀಡುತ್ತಿದ್ದನು. ಅದೇ ಕಾರಣದಿಂದ ಶೇಖರಪ್ಪ ಬೆಟ್ಟಿಂಗ್ ಹಣ ಸಂಗ್ರಹಿಸುವ ದಂಧೆಯಲ್ಲಿ ತೊಡಗಿದ್ದನು.
ಕಾರ್ಯಚರಣೆಯ ಸಂದರ್ಭದಲ್ಲಿ ಆರೋಪಿ ಶೇಖರಪ್ಪನಿಂದ ರೂ. 20,101 ನಗದು, ಡೈರಿ, ಸ್ಯಾಮ್ಸಂಗ್ ಮೊಬೈಲ್, ಪೆನ್ನು-1, ಕೆಎ-20 ಎಕ್ಸ್ 7804 ನಂಬರ್ ನ ಮೋಟಾರು ಸೈಕಲ್ ವಶಪಡಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.