ಮಂಗಳೂರು, ಸೆ 05 (DaijiworldNews/MS): ಜೆಸಿಬಿ ವಾಹನದ ದಾಖಲೆ ಎಂದು ನಂಬಿಸಿ ಕಾರಿನ ದಾಖಲೆಗಳನ್ನು ಹಾಜರುಪಡಿಸಿ ಸಾಲ ಪಡೆದು ಸಹಕಾರಿ ಸಂಘಕ್ಕೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರಾತಿನಿಧಿಕ ಚಿತ್ರ
ಪದವು ಗ್ರಾಮದ ಪ್ರೀತಂ ಆರೋಪಿ. ಈತ 2018ರ ಜ.20ರಂದು ನೀರುಮಾರ್ಗದ ಸಹಕಾರಿ ಸಂಘದಲ್ಲಿ ವಾಹನದ ಮೇಲೆ ಸಾಲ ಪಡೆದುಕೊಳ್ಳಲಿ ಜೆಸಿಬಿ ದಾಖಲೆಗಳನ್ನು ಹಾಜರುಪಡಿಸಿದ್ದ. 7 ಲಕ್ಷ ರೂ. ಸಾಲ ಪಡೆದು ಮಾಸಿಕ 13,400 ರೂ ಕಂತುಗಳನ್ನು 7 ತಿಂಗಳುಗಳ ಕಾಲ ಕ್ರಮಬದ್ದವಾಗಿ ಪಾವತಿಸಿದ್ದ.
ಉಳಿದ ಕಂತುಗಳನ್ನು ಮರುಪಾವತಿಸದೇ ಇದ್ದಾಗ ಸಹಕಾರಿ ಸಂಘದವರು ವಾಹನದ ದಾಖಲೆಗಳನ್ನು ಆರ್ ಟಿ ಒ ಕಚೇರಿಯಲ್ಲಿ ಪರಿಶೀಲಿಸಿದರು. ಆಗ ಆರೋಪಿ ಸಂಘಕ್ಕೆ ಜೆಸಿಬಿ ವಾಹನಗಳ ದಾಖಲೆ ಹಾಜರುಪಡಿಸಿರುವುದು ಗೊತ್ತಾಗಿದೆ.
ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.