ಕಾಸರಗೋಡು,ಸೆ 05 (DaijiworldNews/AK): ರೈಲು ನಿಲ್ದಾಣ ಸಮೀಪದ ನೆಲ್ಲಿಕುಂಜೆ ಎಂಬಲ್ಲಿ ಶನಿವಾರ ರೈಲು ಹಳಿಗಳ ಮೇಲೆ ಕಲ್ಲಿರಿಸಿದ ಘಟನೆ ಶನಿವಾರ ನಡೆದಿದೆ. ಪೊಲೀಸರ ತನಿಖೆ ವೇಳೆ ಕಿಡಿಗೇಡಿ ಮಕ್ಕಳಿಂದಲೇ ಕೃತ್ಯ ಎಸಗಿರುವುದು ದೃಢಪಟ್ಟಿದೆ.
ಮಂಗಳೂರು-ಚೆನ್ನೈ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಹಾದು ಹೋಗುವ ವೇಳೆ ರೈಲ್ವೇ ಹಳಿ ಮೇಲೆ ಹಾಕಲಾಗಿದ್ದ ಕಲ್ಲುಗಳು ತುಂಡಾದ ಕಾರಣ ಭಾರೀ ದುರಂತ ತಪ್ಪಿದೆ.
ರೈಲು ಸ್ವಲ್ಪ ಅಲುಗಾಡುತ್ತಿದ್ದಂತೆ ಪ್ರಯಾಣಿಕರು ಅನುಮಾನಗೊಂಡು ಕಾಸರಗೋಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಲ್ಲಿರಿಸಿದವರು ಮೂರು ಮತ್ತು ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಾಗಿದ್ದರಿಂದ ಅವರ ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದರು.