ಪೆರಾಜೆ, ಸೆ 05 (DaijiworldNews/MS): ಪತಿಯ ಅಗಲಿಕೆಯಿಂದ ನೋವಿನಿಂದ ಹೊರಬರಲಾರದೆ ಯುವ ನರ್ಸ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೆರಾಜೆಯಲ್ಲಿ ನಡೆದಿದೆ.
ಮೃತರನ್ನು ಸವಣೂರು ಗ್ರಾಮದ ಪೆರಿಯಡ್ಕ ನಿವಾಸಿ, ದಿ| ದಿನೇಶ್ ಪೆರಿಯಡ್ಕ ಅವರ ಪತ್ನಿ , ನರ್ಸ್ ವೃತ್ತಿಯಲ್ಲಿದ್ದ ರೂಪಾ (30 ವರ್ಷ) ಎಂದು ತಿಳಿದು ಬಂದಿದೆ.
ರೂಪಾ ಅವರು ಮೂಲತಃ ಕೊಡಗು ಜಿಲ್ಲೆಯ ಪೆರಾಜೆಯವರು.ಎರಡು ವರ್ಷಗಳ ಹಿಂದೆ ಅವರನ್ನು ಸವಣೂರಿನ ಪೆರಿಯಡ್ಕಕ್ಕೆ ಮದುವೆ ಮಾಡಿಕೊಡಲಾಗಿತ್ತು.ಕಳೆದ ಹದಿನೈದು ದಿನಗಳ ಅ. 7 ರಂದು ದಿನೇಶ್ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದಾದ ಬಳಿಕ ರೂಪಾ ತವರು ಮನೆ ಪೆರಾಜೆಗೆ ಬಂದಿದ್ದರು. ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚೂಡಿದಾರ ಶಾಲು ಬಳಸಿ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಕೊಡಗು ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821