ಮೂಡುಬಿದಿರೆ, ಏ 10 (MSP): ಮನೆಯೊಂದಕ್ಕೆ ನುಗ್ಗಿ ನಗ - ನಾಣ್ಯ ದೋಚಿದ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಮೂಡುಬಿದಿರೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳವುಗೈದ ಆರೋಪಿಯನ್ನು ಮೂಡಿಬಿದಿರೆಯ ಪಣಪಿಲ ಗ್ರಾಮದ ಪಿಜತರಡ್ಡ ಮನೆಯ ಸೂರಜ್ (20) ಎಂದು ಗುರುತಿಸಲಾಗಿದೆ.
ಈತ ಮಾ.೧೭ರಂದು ಮೂಡುಬಿದಿರೆಯ ಮಾರೂರು ಎಂಬಲ್ಲಿ ಆನಂದ ಎಂಬವರ ಮನೆಗೆ ಕನ್ನ ಹಾಕಿ ಬೀರುವಿನಲ್ಲಿಟ್ಟಿದ್ದ ಸುಮಾರು 1 , 80 , 000 39 ನಗದು ಮೌಲ್ಯದ ಗ್ರಾಂ ತೂಕದ ಒಂದು ಮಲ್ಲಿಗೆ ಸರ ಹಾಗೂ 25 ಗ್ರಾಂ ತೂಕವಿರುವ ಪೆಂಡೆಂಟ್ ಇರುವ ಉದ್ದದ ಚಿನ್ನದ ಸರ ಕಳವುಗೈದಿದ್ದ. ಕಳ್ಳತನದ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈತ ಮೂಡುಬಿದಿರೆ ಬಸ್ ನಿಲ್ದಾಣ ಬಳಿ ಏ.9 ರ ಮಂಗಳವಾರ ಬೆಳಗ್ಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಸಂಶಯಗೊಂಡ ಪೊಲೀಸರು ಈತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದು ಕಳವು ಕೃತ್ಯ ಬಯಲಾಗಿದೆ. ಕಳ್ಳತನ ಮಾಡಿದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡು ಆತನನ್ನು ಆರೆಸ್ಟ್ ಮಾಡಿದ್ದಾರೆ.
ಪತ್ತೆ ಕಾರ್ಯದಲ್ಲಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಐಪಿಎಸ್ , ಉಪ ಪೊಲೀಸ್ ಆಯುಕ್ತರಾದ ( ಕಾ&ಸು ) ಹನುಮಂತರಾಯ , ಉಪ ಪೊಲೀಸ್ ಆಯುಕ್ತರಾದ ( ಅ&ಸಂ ) ಉಮಾ ಪ್ರಶಾಂತ್ ಐಪಿಎಸ್ ಹಾಗೂ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ ಗೌಡ . ಆರ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಮೂಡುಬಿದಿರೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಎಸ್ ಗಂಗಾಧರ್, ಅಖಿಲ್ ಅಹಮ್ಮದ್ , ಸಂತೋಷ್ ಮತ್ತು ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿರುತ್ತಾರೆ.