ಕಾಸರಗೋಡು, ಸೆ 02 (DaijiworldNews/HR): ಜಿಲ್ಲೆಯಲ್ಲಿ ರೈಲುಗಳ ಕೆಲ್ಲೆಸೆತದ ಘಟನೆ ಮತ್ತೆ ಮರುಕಳಿಸಿದ್ದು, ತಿರುವನಂತಪುರದಿಂದ ಮುಂಬೈಗೆ ತೆರಳುತ್ತಿದ್ದ ನೇತ್ರಾವತಿ ರೈಲಿಗೆ ಶುಕ್ರವಾರ ರಾತ್ರಿ ಕುಂಬಳೆ- ಉಪ್ಪಳ ನಡುವೆ ಕಲ್ಲೆಸೆದ ಘಟನೆ ನಡೆದಿದೆ.
ಎಸ್ -2 ಬೋಗಿಗೆ ಕಲ್ಲೆಸೆಯಲಾಗಿದ್ದು, ಬಾಗಿಲಿನ ಗಾಜು ಹುಡಿಯಾಗಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಘಟನೆ ಬಗ್ಗೆ ಮಂಗಳೂರಿನ ರೈಲ್ವೆ ಭದ್ರತಾ ಪಡೆ ಸ್ಥಳಕ್ಕೆ ತಲಪಿ ತಪಾಸಣೆ ನಡೆಸಿದ್ದು, ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳೆದ ಒಂದೆರಡು ತಿಂಗಳಿನಿಂದ ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಕಲ್ಲೆಸೆತದ ಘಟನೆಗಳು ನಡೆದಿದ್ದು, ಆಗಸ್ಟ್ 16 ರಂದು ಕಣ್ಣೂರಿನಲ್ಲಿ ವಂದೇ ಭಾರತ್, 24ರಂದು ತಲಶ್ಯೇರಿ ಯಲ್ಲಿ ಏರನಾಡ್ ಎಕ್ಸ್ ಪ್ರೆಸ್ ರೈಲಿನ ಮೇಲೆ ಕಲ್ಲೆಸೆದ ಘಟನೆ ನಡೆದಿತ್ತು .
ಕೆಲ ತಿಂಗಳಿಂದ ಕಾಸರಗೋಡು - ಕಣ್ಣೂರು ನಡುವೆ ರೈಲುಗಳ ಮೇಲೆ ಹಲವಾರು ಕಲ್ಲೆಸೆತದ ಘಟನೆಗಳು ನಡೆದಿದೆ.