ಉಡುಪಿ, ಆ 30 (DaijiworldNews/MS): ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಿಜವಾದ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾ ಸೌಜನ್ಯ ಹೋರಾಟ ಸಮಿತಿಯ ನೇತೃತ್ವದಲ್ಲಿ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಸಭೆಗೂ ಮುನ್ನ ಪ್ರತಿಭಟನಾಕಾರರು ಉಡುಪಿಯ ಅನಂತೇಶ್ವರ ಮತ್ತು ಕೃಷ್ಣ ಮಠಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ಕೃಷ್ಣಮಠದಿಂದ ಅಜ್ಜರಕಾಡುವಿನ ತನಕ ಪಾದಾಯಾತ್ರೆ ನಡೆಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ “ಕಳೆದ 11 ವರ್ಷದಿಂದ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ಪ್ರತಿಭಟನೆಗೆ ಕಪ್ಪು ಚುಕ್ಕೆ ಬಂದ್ರೆ ಸುಮ್ಮನಿರಲ್ಲ. ನಾವು ಶಾಂತ ರೀತಿಯ ಹೋರಾಟ ಮಾಡುತ್ತಿದ್ದೇವೆ. ಈ ಪರಿಪಾಠ ಮುಂದುವರೆದರೆ ಹೋರಾಟ ತೀವ್ರಗೊಳಿಸುತ್ತೇವೆ. ಲಕ್ಷ ಕೋಟಿ ಸಂಖ್ಯೆಯಲ್ಲಿ ಧರ್ಮಸ್ಥಳದಲ್ಲಿ ಪ್ರತಿಭಟನೆ ಮಾಡುತ್ತೇವೆ. ಸಿಎಂ, ಗೃಹಸಚಿವರು, ಪ್ರಧಾನಿಗೆ ಎಚ್ಚರಿಕೆ ಕೊಡುತ್ತೇನೆ. ಯಾಕೆ ನೀವು ಆರೋಪಿಗಳನ್ನು ರಕ್ಷಿಸಿ ಇಟ್ಟಿದ್ದೀರಿ. ಮಾತೆಯರನ್ನು ನಮ್ಮ ಮೇಲೆ ಚೂ ಬಿಡ್ತೀರಾ?. ನಮ್ಮ ಬಳಿಯೂ ಮಾತೆಯರಿದ್ದಾರರ. ಎಂತೆಂತಹ ದುರ್ಗಾದೇವಿಯರಿದ್ದಾರೆ ಗೊತ್ತಾ? ದುಡ್ಡಿಗೋಸ್ಕರ ಅಲ್ಲ ಸತ್ಯ ಧರ್ಮ ನ್ಯಾಯಕ್ಕೋಸ್ಕರ ಹೋರಾಡುವ ದುರ್ಗೆಯರಿದ್ದಾರೆ. ಭಾಷಣ ಮಾಡುವುದು ನಮಗೆ ತೀಟೆ ಅಲ್ಲ. ನಮ್ಮ ತೆರಿಗೆಯ ಹಣ ಪ್ರಕರಣದ ತನಿಖೆಗೆ ಬಳಕೆಯಾಗಿದೆ. ಪ್ರಕರಣ ತನಿಖೆಗೆ 80 ಕೋಟಿ ಅಧಿಕ ಖರ್ಚಾಗಿದೆ. ಜನರ ತೆರಿಗೆ ಹಣಕ್ಕೆ ಬೆಲೆ ಇಲ್ವಾ?.ಅಂದು ಸೌಜನ್ಯ ನ ಸಾವಾದಾಗ ಅಂದು ಇದ್ದ ಮುಖ್ಯಮಂತ್ರಿ, ಗೃಹ ಮಂತ್ರಿಗಳು ಇಂದು ಏನಾಗಿದ್ದಾರೆ ಎಂದು ಯೋಚಿಸಿ ನೋಡಿ, ಇವರೆಲ್ಲ ಸೌಜನ್ಯ ಪ್ರಕರಣವನ್ನು ಮುಚ್ಚಿಸಿದ್ದಾರೆ . ಇಲ್ಲಿನ ಸಂಸದೆ ಶೋಭಾ ಕರಂದ್ಲಾಂಜೆ ಕೂಡಾ ಅಂದು ಧರ್ಮಸ್ಥಳಕ್ಕೆ ಬಂದು ಹೋಗಿದ್ದರು ಆದರೆ ಅವರದೇ ಸಂಬಂಧದ ಸಾವೀಗೀಡಾಗಿದ್ದ ಸೌಜನ್ಯ ನ ಮನೆಗೆ ಭೇಟಿ ನೀಡಲಿಲ್ಲ. ಶೋಭಾ ಕರಂದ್ಲಾಂಜೆ ಗೆ ಮಕ್ಕಳನ್ನು ಹೆತ್ತು, ಸಲಹಿ ತಿಳಿದಿಲ್ಲ ಆದುದರಿಂದ ಸೌಜನ್ಯ ನ ತಾಯಿಯ ದುಖ ಅವರಿಗೆ ಅರ್ಥವಾಗಿಲ್ಲ. ಧರ್ಮದಲ್ಲಿ ನಾವು ಇದ್ದೇವೆ. ಮನೆಯವರು ನ್ಯಾಯಾಲಯದಲ್ಲಿ ದೂರು ಕೊಟ್ಟರು ಕೂಡ ಆರೋಪಿಗಳವಿರುದ್ದ ಕ್ರಮ ಆಗಿಲ್ಲ. ನಾವು ಈಗ ನಮ್ಮ ಬಾಯಿಯಿಂದ ಮಾತ್ರ ಸತ್ಯ ಹೇಳಬಹುದು ಆದರೇ ಒಂದೇ ಒಂದು ಅಕ್ಷರದ ದಾಖಲೆ ಇಲ್ಲ, ಇದನ್ನು ಆಗಿನ ಪೋಲೀಸ ರು ನುಂಗಿ ನೀರು ಕುಡಿದಿದ್ದಾರೆ. ಧರ್ಮಸ್ಥಳ ನ್ಯಾಯದ ಪೀಠ.ಅಂತಹ ಜಾಗದಲ್ಲಿ ಇಂದು ನ್ಯಾಯ ಸಿಗುವುದಿಲ್ಲ ಎಂದಾದರೆ ಸನಾತನ ಹಿಂದೂ ಧರ್ಮ ನಾಶ ಆಗಿ ಹೋಗುತ್ತದೆ. ಈ ದೇಶದ ನ್ಯಾಯಾಂಗ ವ್ಯವಸ್ಥೆ ಸರಿ ಆಗಬೇಕು. ಮುಂದಿನ ಎರಡು ಮೂರು ತಿಂಗಳು ನಿರಂತರ ಹೋರಾಟ ನಡೆಯಲಿದೆ. ಸೌಜನ್ಯ ನ ತಾಯಿ ಯಾರ ವಿರುದ್ದ ಆರೋಪ ಮಾಡಿದ್ದರೋ ಆಗೆ ಶಿಕ್ಷೆ ಆಗಬೇಕು" ಎಂದರು.
ಈ ಸಂದರ್ಭದಲ್ಲಿ ಸೌಜನ್ಯ ತಾಯಿ ಕುಸುಮಾವತಿ, ದೈವ ಚಿಂತಕರದ ತಮ್ಮಣ್ಣ ಶೆಟ್ಟಿ, ಸಾವಿರಾರು ಮಂದಿ ಹೊರಟಗಾರರು ಭಾಗವಹಿಸಿದರು.
ಇದೇ ವೇಳೆ, ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಧರ್ಮಸ್ಥಳ ಕ್ಷೇತ್ರದ ಅಭಿಮಾನಿಗಳನ್ನು ಪೋಲೀಸ ರು ಸ್ಥಳದಿಂದ ತೆರವು ಮಾಡಿದರು. ಸ್ಥಳದಲ್ಲಿ ಬಿಗು ಪೋಲೀಸು ಬಂದೋಬಸ್ತ್ ಅನ್ನು ಕೂಡ ಮಾಡಲಾಗಿತ್ತು.