ಸುಳ್ಯ, ಏ 09(SM): ಅಕ್ರಮವಾಗಿ ಗೋವೊಂದನ್ನು ಹತ್ಯೆಗೈದು ಮಾಂಸ ಮಾಡುತ್ತಿದ್ದ ಬಗ್ಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಓರ್ವ ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ. ಅರಂತೋಡು ನಿವಾಸಿ ಸರ್ಫುದ್ದಿನ್ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ.
ಸುಳ್ಯ ತಾಲ್ಲೂಕು ಅರಂತೋಡು ಗ್ರಾಮದ ಶಾಲೆಯ ಬಳಿ ಸಂಶುದ್ದಿನ್ ಅವರ ಮನೆಯ ಹಿಂಬದಿಯಲ್ಲಿ ಅಕ್ರಮವಾಗಿ ಗೋವನ್ನು ವಧೆ ಮಾಡಿ ಮಾಂಸವನ್ನು ಮಾರಾಟ ಮಾಡಲಾಗುತ್ತದೆ ಎನ್ನಲಾಗಿತ್ತು. ಈ ಹಿನ್ನೆಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಮುನೀರ್ ಮತ್ತು ಮುಬಾರಕ್ ಎಂಬ ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಇನ್ನು ಸ್ಥಳದಲ್ಲಿದ್ದ ಗೋ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆರೋಪಿ ಪರಾರಿಯಾಗಿದ್ದಾನೆ.
ಇನ್ನು ಸ್ಥಳದಲ್ಲಿದ್ದ ಸ್ಕೇಲ್ ಮತ್ತು ತೂಕದ ಕಲ್ಲು ಅಂದಾಜು ಮೌಲ್ಯ 1000 ಸ್ವತ್ತು ಮತ್ತು ಎರಡು ಚೂರಿಗಳು ಮರದ ತುಂಡುಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿದೆ.