ಮಂಗಳೂರು,ಏ09(AZM): ಮಂಗಳೂರು ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಮಠದಕಣಿ ರಸ್ತೆಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಧಂದೆಯಲ್ಲಿ ನಿರತರಾಗಿದ್ದವರನ್ನು ಹಾಗೂ ಹಣಕ್ಕಾಗಿ ಸಾರ್ವಜನಿಕರಿಗೆ ಬೆಟ್ ಪ್ರೊ (BETPRO) ಎಂಬ ಮೊಬೈಲ್ ಅಪ್ನ ಪಾಸ್ ವಾರ್ಡ್ ಗಳನ್ನು ನೀಡಿ ಹಣವನ್ನು ಸಂಗ್ರಹಿಸುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏ.08 ಸೋಮವಾರದಂದು ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಮಠದಕಣಿ 5 ನೇ ಕ್ರಾಸ್ ರಸ್ತೆಯ ಬಳಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ನಿರತರಾಗಿದ್ದ ಮಠದಕಣಿ ನಿವಾಸಿಗಳಾದ ಸುನಿಲ್ ಮೆಲ್ವಿನ್ ರೇಗೋ(42), ತಂದೆ: ಸ್ಟಾನಿ ರೇಗೋ, ಉಳ್ಳಾಲ ನಿವಾಸಿ ಶೋಕ್ ಅಂಚನ್,(46), ತಂದೆ: ಕೃಷ್ಣಪ್ಪ, ಸಂತೋಷ್ ಜಾನ್ (47) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೂ ಅವರಿಂದ ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕಾಗಿ ಹಾಗೂ ಕ್ರಿಕೆಟ್ ಬೆಟ್ಟಿಂಗ್ ಗಾಗಿ ಬೆಟ್ ಪ್ರೊ(BETPRO) ಎಂಬ ಮೊಬೈಲ್ ಆಪ್ ನ ಪಾಸ್ ವಾರ್ಡ್ ಗಾಗಿ ಸಾರ್ವಜನಿಕರಿಂದ ಹಣವನ್ನು ವಂಚನೆ ಮಾಡುವ ಮೂಲಕ ಸಂಗ್ರಹಿಸಿದ ಒಟ್ಟು ರೂ. 4,25,000/- ನಗದು ಮತ್ತು 5 ಮೊಬೈಲ್ ಪೋನ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಒಟ್ಟು 4,50,000 ರೂಪಾಯಿಗಳ ಸ್ವತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಐ.ಪಿ.ಎಸ್ ರವರ ನಿರ್ದೇಶನದಲ್ಲಿ ಪೊಲೀಸ್ ಉಪ ಆಯುಕ್ತರಾದ ಹನುಮಂತರಾಯ, ಐ.ಪಿ.ಎಸ್ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯರವರಾದ ಉಮಾ ಪ್ರಶಾಂತ್, ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಆರ್ ನಾಯ್ಕ್ ಪಿಎಸ್ಐ ಕಬ್ಬಾಳ್ ರಾಜ್, ಶಂಕರ ನಾಯರಿ ಮತ್ತು ಸಿಸಿಬಿ ಸಿಬ್ಬಂದಿಗಳು ಹಾಗೂ ಮಂಗಳೂರು ಬರ್ಕೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸೂರಜ್ , ಪಿಎಸ್ಐ ಹೀರಾವತಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.