ಉಡುಪಿ, ಆ 23 (DaijiworldNews/MS): ಜಿಲ್ಲೆಯಲ್ಲಿ ಮಣಿಪಾಲ ಪರಿಸರದಲ್ಲಿ ಮಧ್ಯರಾತ್ರಿಯ ನಂತರವೂ ಯಾವುದೇ ಪರವಾನಿಗೆ ಇಲ್ಲದೆ ಪಬ್ಬುಗಳು ಬೇಕಾಬಿಟ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಕ್ಲಬ್, ಪಬ್, ಮಟ್ಕಾದಂಧೆ ನಿಲ್ಲಿಸಲು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರನ್ನು ಒತ್ತಾಯಿಸಿದ್ದಾರೆ.
ಉಡುಪಿ ಜಿಲ್ಲೆಯಾದ್ಯಂತ ರಿಕ್ರಿಯೇಷನ್ ಕ್ಲಬ್ನ ಹೆಸರಿನಲ್ಲಿ ಅವ್ಯಹತವಾಗಿ ಇಸ್ಪಿಟ್ ಕ್ಲಬ್ಗಳು ದಿನದ 24 ಗಂಟೆಯೂ ತೆರೆದಿರುವುದು ಜಗತ್ಜಾಹೀರವಾಗಿದ್ದು, ನಮ್ಮ ಗಮನಕ್ಕೆ ಬಂದಿರುತ್ತದೆ. ಅಬಕಾರಿ ಇಲಾಖೆಯ ಸಿಎಲ್ 7 ಮತ್ತು ಸಿಎಲ್ 9 ಬಳಸಿಕೊಂಡು ಪಬ್ಬುಗಳಲ್ಲಿ ಮತ್ತು ಡಿಸ್ಕೋಗಳಲ್ಲಿ ಡಿಜೆ ಮ್ಯೂಸಿಕ್ ಬಳಸಿ ನಡೆಸುತ್ತಿದ್ದು, ಸದ್ರಿ ಚಟುವಟಿಕೆಗಳು ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅಬಕಾರಿ ಇಲಾಖೆಯ ಕಾನೂನಿನಂತೆ ಬಾರ್ ಮತ್ತು ರೆಸ್ಟೋರೆಂಟ್ನ ನಿಗದಿತ ಮುಕ್ತಾಯ ಅವಧಿಯ ನಂತರವೂ ಕೆಲವೊಂದು ಬಾರ್ ಮತ್ತು ರೆಸ್ಟೋರೆಂಟ್ಗಳು ತನ್ನ ವ್ಯವಹಾರವನ್ನುಯಾವುದೇ ಅಳುಕು ಇಲ್ಲದೆ ನಡೆಸಿಕೊಂಡು ಬಂದಿರುತ್ತದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿರುತ್ತದೆ.
ಮಣಿಪಾಲದ ಡಿಸಿ ಕಛೇರಿ ರಸ್ತೆಯಲ್ಲಿರುವ ಕೆಲವು ರೆಸ್ಟೋರೆಂಟ್ಗಳು ಮುಂಜಾನೆ 3 ಗಂಟೆಯವರೆಗೂತೆರೆದಿರುತ್ತದೆ. ಮಣಿಪಾಲದ ಬಾರ್ ಮತ್ತು ರೆಸ್ಟೋರೆಂಟ್ಗಳು ಹಾಗೂ ಮುಂಜಾನೆವರೆಗೂ ತೆರೆದಿರುವ ರೆಸ್ಟೋರೆಂಟ್ಗಳು ಡ್ರಗ್ಸ್ ಸೇವನೆಯ ಅಡ್ಡೆಯಾಗಿರುತ್ತದೆ. ಮಣಿಪಾಲವು ಡ್ರಗ್ಸ್ ಕೇಂದ್ರವಾಗಿ ಬೆಳೆಯುತ್ತಿರುವುದು ಸ್ಥಳೀಯ ವಿದ್ಯಾರ್ಥಿಗಳು, ಸ್ಥಳೀಯ ಯುವಜನತೆ ಮತ್ತು ಹೊರ ಊರಿನಿಂದ ಮತ್ತು ಹೊರದೇಶಗಳಿಂದ ವಿದ್ಯಾಭ್ಯಾಸಕ್ಕಾಗಿ ಬರುವ ಯುವಜನತೆಯ ಡ್ರಗ್ಸ್ನ ಹಾವಳಿಗೆ ದಾಸರಾಗಿರುತ್ತಾರೆ.
ಆದುದರಿಂದ ಉಡುಪಿ ಮತ್ತು ಮಣಿಪಾಲದಲ್ಲಿ ಕಾನೂನು ಬಾಹಿರವಾಗಿಕಾರ್ಯನಿರ್ವಹಿಸುತ್ತಿರುವ ಪಬ್ಬುಗಳು, ಕ್ಲಬ್ಬುಗಳು ಮತ್ತು ಅವಧಿ ಮೀರಿ ವ್ಯವಹಾರ ನಡೆಸುವ ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಮುಂಜಾನೆವರೆಗೂ ತೆರೆದಿರುವ ರೆಸ್ಟೋರೆಂಟ್ನ ವಿರುದ್ಧ ಮತ್ತು ಜಿಲ್ಲೆಯಲ್ಲಿ ನಡೆಯುತ್ತಿರುವ ವ್ಯಾಪಕ ಮಟ್ಕಾದಂಧೆಯನ್ನು ನಿರ್ದ್ಯಾಕ್ಷಿಣ್ಯವಾಗಿ ನಿಲ್ಲಿಸಬೇಕೆಂದು ಎಂದು ಪತ್ರಿಕಾ ಪ್ರಕಟನೆಯ ಮೂಲಕ ಒತ್ತಾಯಿಸಿದ್ದಾರೆ.