ಕಾಸರಗೋಡು, ಆ 21 (DaijiworldNews/SM): ಚಿನ್ನದ ವ್ಯವಹಾರಕ್ಕೆ ಸಂಬಂಧಿಸಿ ತಂಡವೊಂದು ಯುವಕನನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರನ್ನು ಗಂಟೆಗಳ ಅವಧಿಯಲ್ಲಿ ಬಂಧಿಸುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ.
ಕೂಡ್ಲು ಮೀಪುಗುರಿ ಗಲ್ಫ್ ಕ್ವಾರ್ಟರ್ಸ್ನ ಅಹಮ್ಮದ್ ಜಾಬೀರ್ (36) ಎಂಬ ಯುವಕ ಸ್ನೇಹಿತನೋರ್ವನೊಂದಿಗೆ ಶನಿವಾರ ರಾತ್ರಿ ಕಾರಿನಲ್ಲಿ ಬಂದ ತಂಡ ಅಹಮ್ಮದ್ ಜಾಬೀರ್ನನ್ನು ಕಾರಿಗೆ ಬಲವಂತವಾಗಿ ಹತ್ತಿ ಸಿ ಅಹಮ್ಮದ್ ಜಾಬೀರ್ ಜತೆ ಇದ್ದ ಆತನ ಸ್ನೇಹಿತನ ಮೇಲೆ ಅಪಹರ ಣಗಾರರು ಹಲ್ಲೆ ನಡೆಸಿ ಆತನನ್ನು ಅಲ್ಲೇ ಬಿಟ್ಟು ಹೋದರೆನ್ನಲಾಗಿದೆ. ಈ ಮಧ್ಯ ಅಹಮ್ಮದ್ ಜಾಬೀರ್ನ ತಾಯಿ ಕಾಸರಗೋಡು ಪೊಲೀಸ್ ಠಾಣೆಗೆ ಬಂದು ತನ್ನ ಪುತ್ರ ನಾಪತ್ತೆಯಾಗಿರುವುದಾಗಿ ದೂರು ನೀಡಿದರು. ಈ ಮಧ್ಯೆ ಅಪಹರಣ ಗಾರರು ಅಹಮ್ಮದ್ ಜಾಬೀರ್ನನ್ನು ಮುಂಜಾನೆ ಸುಮಾರು ೪ ಗಂಟೆ ವೇಳೆಗೆ ನಗರದ ಹೊಸ ಬಸ್ ನಿಲ್ದಾಣದ ಪರಿಸರದಲ್ಲಿ ತೊರೆದು ಪರಾರಿಯಾದರೆನ್ನಲಾಗಿದೆ. ಅಹಮ್ಮದ್ ಜಾಬೀರ್ನನ್ನು ಅಪಹರಿಸಿದವರ ಪತ್ತೆಗಾಗಿ ಪೊಲೀಸರು ತಕ್ಷಣ ಕಾರ್ಯಾಚರಣೆಗಿಳಿದು, ಘಟನೆ ನಡೆದ ಕೆಲವೇ ತಾಸುಗಳೊಳಗಾಗಿ ಅಪಹರಣ ಗಾರರಿಬ್ಬರನ್ನು ಬಂಧಿಸುವಲ್ಲೂ ಸಫಲರಾಗಿದ್ದರು.ಅಣಂಗೂರು ನಿವಾಸಿಗಳಾದ ಅಝರುದ್ದೀನ್ (೨೬) ಮತ್ತು ಖಾದರ್ (೨೫) ಎಂಬವರು ಬಂಧಿತರಾದ ಆರೋಪಿಗಳಾಗಿದ್ದಾರೆ. ಕಾಸರಗೋಡು ಪೊಲೀಸ್ ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ನ ನೇತೃತ್ವದ ಪೊಲೀಸರ ತಂಡ ಇವರನ್ನು ಬಂಧಿಸಿದೆ.
ಅಹಮ್ಮದ್ ಜಾಬೀರ್ ಈ ಹಿಂದೆ ಗಲ್ಫ್ನಲ್ಲಿ ಉದ್ಯೋಗದಲ್ಲಿದ್ದನು. ಅಲ್ಲಿಂದ ಆತ ಇತ್ತೀಚೆಗಷ್ಟೇ ಊರಿಗೆ ಹಿಂತಿರುಗಿದ್ದರೆಂದೂ, ಆ ವೇಳೆ ಆತ ಚಿನ್ನ ತಂದಿದ್ದನೆಂದು, ಆ ಚಿನ್ನದ ವ್ಯವಹಾರ ಹೆಸರಲ್ಲಿ ಆತನನ್ನು ಅಪಹರಿಸಲಾ ಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.