ಬೆಳ್ತಂಗಡಿ, ಆ 21(DaijiworldNews/MS): ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳಂಜದಲ್ಲಿ ಆ.20ರಂದು ಸಂಜೆ ನಡೆದಿದೆ.
ಕ್ರಿಸ್ಟಾ ಅರೇಂಜರ್ ನ ಆಲ್ವಿನ್ ಪಿಂಟೋ ಅವರ ಪತ್ನಿ ಸಿಂಥಿಯಾ ಮೃತರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ವೇಣೂರು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.