ಮಂಗಳೂರು, 21(DaijiworldNews/MS): ಇಂದು ನಾಗರ ಪಂಚಮಿ ಸಂಭ್ರಮ. ಕರಾವಳಿಯಾದ್ಯಂತ ಪಂಚಮಿ ಹಬ್ಬವನ್ನು ಶೃದ್ದಾ ಭಕ್ತಿಯಿಂದ ಆಚರಿಸಲಾಗುತ್ತದೆ. ವಿವಿಧ ಕುಟುಂಬಗಳ ಮೂಲ ಮನೆಗಳಲ್ಲಿ ನಾಗಾರಾಧನೆ ನಡೆಯುತ್ತದೆ.
ಕರಾವಳಿಯಲ್ಲಿ ನಾಗಾರಾಧನೆಗೆ ತನ್ನದೇ ಆದ ಮಹತ್ವವಿದೆ. ತುಳು ನಾಡ ಜನರ ಪಾಲಿನ ಮೊದಲ ಹಬ್ಬ ನಾಗರ ಪಂಚಮಿ. ತನು ಮೈಪಾವೊಡು, ತಂಬಿಲ ಕಟ್ಟಾವೊಡು’ ಎಂಬ ಪೂರ್ವ ವಾಡಿಕೆಯಂತೆ ಮೂಲಸ್ಥಾನಗಳಲ್ಲಿ ನಾಗದೇವರಿಗೆ ನಾಗರಪಂಚಮಿ ಪರ್ವಕಾಲದಲ್ಲಿ ತಂಪೆರೆಯಿಸಿ, ತನಿ ಹರಕೆಗೊಂಡು ತನಿಯನ್ನು ಬಯಸುತ್ತಾ ಮೂಲನಾಗನ ದರ್ಶನದಿಂದ ಧನ್ಯರಾಗುವ ಆಸ್ತಿಕರು ’ನಗುತ್ತಾ ಬರುವ ನಾಗರಪಂಚಮಿ’ಯನ್ನು ಪ್ರಥಮ ಹಬ್ಬವೆಂದು ಸ್ವೀಕರಿಸುತ್ತಾರೆ.
ಮಂಗಳೂರಿನ ನಗರ ವ್ಯಾಪ್ತಿಯಲ್ಲಿ ಕುಡುಪು ಅನಂತಪದ್ಮನಾಭ ದೇವಸ್ಥಾನ, ಊರ್ವ ಮಾರಿಯಾಮ್ಮ, ಕದ್ರಿ , ಶ್ರವು , ಶ್ರೀ ಕ್ಷೇತ್ರ ಮಂಗಳಾದೇವಿ ಸಹಿತ ವಿವಿಧ ಆಲಯಗಳಲ್ಲಿ ನಾಗರ ಪಂಚಮಿ ಆಚರಣೆ ನೆರವೇರಲಿದೆ.