ಕಾಸರಗೋಡು, ಆ 20 (DaijiworldNews/SM): ಕರಾವಳಿ ಪೊಲೀಸ್ ರಕ್ಷಣಾ ಬೋಟ್ ನ ನೌಕರರಾದ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಸಂಜೆ ನೀಲೇಶ್ವರ ದ ತೈಕಡಪ್ಪುರದಲ್ಲಿ ನಡೆದಿದೆ.
ರಾಜೇಶ್ ( ೩೫) ಮತ್ತು ರಕ್ಷಣಾ ಬೋಟ್ ನ ನೌಕರ ಸನೀಶ್ ( 32) ಮೃತಪಟ್ಟವರು. ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೀನು ಹಿಡಿಯುತ್ತಿದ್ದಾಗ ರಾಜೇಶ್ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದಿದ್ದು , ಉಳಿದವರು ಬೊಬ್ಬೆ ಹಾಕಿದಾಗ ಅಲ್ಲೇ ಇದ್ದ ಸನೀಶ್ ಸಮುದ್ರಕ್ಕೆ ಹಾರಿ ರಾಜೇಶ್ ನನ್ನು ರಕ್ಷಿಸಲೆತ್ನಿಸಿದ್ದು , ಈ ಸಂದರ್ಭದಲ್ಲಿ ಸನೀಶ್ ಕೂಡಾ ನೀರುಪಾಲಾಗಿದ್ದಾರೆ.
ಕರಾವಳಿ ಪೊಲೀಸರು, ಸ್ಥಳೀಯರು ಶೋಧ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.