ಮಂಗಳೂರು, ಆ 20 (DaijiworldNews/HR): ಪೊಲೀಸ್ ಅಧಿಕಾರಿಯೆಂದು ಬಿಂಬಿಸಿ ವಂಚಿಸಲು ಪ್ರಯತ್ನಿಸುತ್ತಿದ್ದ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಯನ್ನು ಉರ್ವ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬೆನೆಡಿಕ್ಟ್ ಸಾಬೂ (25) ಬಂಧಿತ ಆರೋಪಿ.
ಬಂಧಿತ ಆರೋಪಿಯಿಂದ ಕೇರಳದ ‘ರಾ’ ಅಧಿಕಾರಿ ಮತ್ತುಅಗ್ರಿಕಲ್ಚರ್ ಹಾಗೂ ಫಾರ್ಮರ್ಸ್ ವೆಲ್ಫೇರ್ ಡಿಪಾರ್ಟೆಂಟ್ಮೆಂಟ್ ಎಂಬ 380 ಐಡಿ ಕಾರ್ಡ್ ಗಳನ್ನು ಹಾಗೂ ಒಂದು ಜೊತೆ ಪಿಎಸ್ಸೈ ಪೊಲೀಸ್ ಸಮವಸ್ತ್ರ, ಪೊಲೀಸ್ ಶೂಸ್, ಲೊಗೋ, ಮೆಡಲ್, ಬೆಲ್ಟ್, ಕ್ಯಾಪ್, 1 ಲ್ಯಾಪ್ ಟಾಪ್ ಮತ್ತು 2 ಮೊಬೈಲ್ ಸೆಟ್ ಗಳನ್ನು ವಶಪಡಿಸಲಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಹಿನ್ನಲೆಯಲ್ಲಿ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಕುಲದೀಪ್ ಜೈನ್ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪ-ಆಯುಕ್ತರಾದಅಂಶು ಕುಮಾರ್ ಮತ್ತು ದಿನೇಶ್ ಕುಮಾರ್ ರವರ ನಿರ್ದೇಶನದಂತೆ ಮಂಗಳೂರು ಸೆಂಟ್ರಲ್ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಮಹೇಶ್ ಕುಮಾರ್ ರವರ ಸೂಚನೆಯಂತೆ ಉರ್ವ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.