ಉಡುಪಿ, ಆ 20 (DaijiworldNews/HR): ಭಾರತದ ಹೆಸರಾಂತ ಸ್ವರ್ಣೋದ್ಯಮ ಸಂಸ್ಥೆ ಜೋಸ್ ಅಲುಕ್ಕಾಸ್ ಜುವೆಲ್ಲರಿಯ ಜೋಸ್ ಆಲುಕ್ಕಾಸ್ ಫೌಂಡೇಶನ್ ನ ಸಿಎಸ್ಆರ್ ನಿಧಿಯಿಂದ ಆಂಬುಲೆನ್ಸ್ ಕೀಲಿಕೈ ಹಸ್ತಾಂತರ ಕಾಯಕ್ರಮವನ್ನು ಉಡುಪಿಯ ಮಾರುತಿ ವೀಥಿಕಾ ರಸ್ತೆಯಲ್ಲಿರುವ ಷೋರೂಮ್ ನಲ್ಲಿ ಆಯೋಜಿಸಲಾಯಿತು.
ಉಡುಪಿ ನಗರ ಡಿ ವೈ ಎಸ್ ಪಿ ದಿನಕರ್ ಶೆಟ್ಟಿ ಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಡುಪಿ ನಗರ ಠಾಣೆಯ ಪೋಲಿಸ್ ಉಪನಿರೀಕ್ಷಕರಾದ ಪುನೀತ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ (ರಿ) ಇದರ ಸಂಸ್ಥಾಪಕ, ಸಮಾಜ ಸೇವಕ, ಅಪದ್ಬಾಂದವ ನಿತ್ಯಾನಂದ ಒಳಕಾಡು ಇವರಿಗೆ ಅಗತ್ಯ ಸೇವೆಗಳ ಅನುಕೂಲಕ್ಕಾಗಿ ಆಂಬುಲೆನ್ಸ್ ನ್ನು ಕೊಡುಗೆಯಾಗಿ ನೀಡಲಾಯಿತು. ಜೋಸ್ ಆಲುಕ್ಕಾಸ್ ನ ಆಡಳಿತ ನಿರ್ದೇಶಕ ಪೌಲ್ ಅಲುಕ್ಕಾ ರವರು ನಿತ್ಯಾನಂದ ಒಳಕಾಡು ಇವರಿಗೆ ಆಂಬುಲೆನ್ಸ್ ನ ಕೀಲಿಕೈಯನ್ನು ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಹೊಸಬೆಳಕು ಸೇವಾ ಟ್ರಸ್ಟ್ (ರಿ)ಇದರ ಸಂಸ್ಥಾಪಕರಾದ ವಿನಯ ಚಂದ್ರ ಹಾಗೂ ನಿತ್ಯಾನಂದ ಒಳಕಾಡು ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸೇಲ್ಸ್ ಹೆಡ್ ಜೋಸೆಫ್ ಕೆ ಪಿ, ಎಚ್ ಆರ್ ಮ್ಯಾನೇಜರ್ ಟೋನಿ ಇಗ್ನೇಶಿಯಸ್, ಏರಿಯಾ ಮ್ಯಾನೇಜರ್ ಬಿಜು ಟಿ.ಎಲ್, ಮ್ಯಾನೇಜರ್ ರಾಜೇಶ್ ಎನ್ ಆರ್ ಉಪಸ್ಥಿತರಿದ್ದರು. ರಾಕೇಶ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.